ವೇಣೂರು: ಜೈನ ಬಾಂಧವರ ಅವಿಭಜಿತ ಜಿಲ್ಲಾ ಕ್ರೀಡಾಕೂಟ

ಸಂಸಾರಕ್ಕೆ ಸಂಸ್ಕಾರ ಕೊಡುವ ಕೆಲಸ ಕ್ರೀಡೆಯಿಂದಾಗಲಿ: ಸತೀಶ್ ಕುಮಾರ್

ವೇಣೂರು: ಕ್ರೀಡೆಯಿಂದ ವ್ಯಕ್ತಿಯಲ್ಲಿ ಮಾನಸಿಕ ದೃಢತೆ, ಉತ್ಸಾಹ ಆತ್ಮವಿಶ್ವಾಸ ಹೆಚ್ಚುತ್ತದೆ. ಸ್ಪರ್ಧಾ ಭಾವನೆಯಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದರೆ ಸಮಾಜದಲ್ಲಿ ಪರಸ್ಪರ ಸಹಕಾರ, ಒಗ್ಗಟ್ಟು ಮೂಡಿಸಲು ಸಾಧ್ಯವಾಗುತ್ತದೆ. ಸಂಸಾರಕ್ಕೆ ಸಂಸ್ಕಾರ ಕೊಡುವ ಕೆಲಸ ಕ್ರೀಡಾಕೂಟಗಳಿಂದ ನಡೆಯಲಿ ಎಂದು ನಿವೃತ್ತ ಸೈನಿಕ, ಬಂಟ್ವಾಳ ತಾ.ಪಂ. ಮಾಜಿ ಸದಸ್ಯ ಸತೀಶ್ ಕುಮಾರ್ ಪಿಲಿಂಗಾಲು ತಿಳಿಸಿದರು.
ವೇಣೂರು ಶ್ರೀ ಬಾಹುಬಲಿ ಕ್ಷೇತ್ರದ ವಠಾರದಲ್ಲಿ ಶ್ರೀ ಬಾಹುಬಲಿ ಯುವಜನ ಸಂಘದ ವತಿಯಿಂದ ಜರಗಿದ ಅವಿಭಜಿತ ದ.ಕ. ಜಿಲ್ಲಾ ಜೈನ ಬಾಂಧವರ ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್ ಹಾಗೂ ಹಗ್ಗಜಗ್ಗಾಟ ಕ್ರೀಡಾಕೂಟ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವೇಣೂರು ಶ್ರೀ ದಿಗಂಬರ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ ಅಧ್ಯಕ್ಷತೆ ವಹಿಸಿದ್ದರು. ಹಗಲು ಹೊತ್ತಿನಲ್ಲಿ ನಡೆದ ಕ್ರೀಡಾಕೂಟವನ್ನು ಮಂಗಳೂರಿನ ವೈದ್ಯೆ ಡಾ| ಶರಣ್ಯ ಅರಿಂಜಯ ಉದ್ಘಾಟಿಸಿದರು. ವೇಣೂರು ಜೈನ್ ಮಿಲನ್ ಅಧ್ಯಕ್ಷ ಪ್ರಮೋದ್ ಕುಮಾರ್, ಬ್ರಾಹ್ಮೀ ಮಹಿಳಾ ಸಂಘದ ಕೋಶಾಧಿಕಾರಿ ಸರೋಜಾ ಜಿ. ಜೈನ್, ಶ್ರೀ ಬಾಹುಬಲಿ ಯುವಜನ ಸಂಘದ ಅಧ್ಯಕ್ಷ ಸಜೇಶ್ ಆರಿಗ, ಕಾರ್ಯದರ್ಶಿ ಸುಶಾಂತ್ ಇಂದ್ರ ಉಪಸ್ಥಿತರಿದ್ದರು. ಪ್ರಮೋದ್ ಕುಮಾರ್, ಡಾ| ಅಶೋಕ್ ಮತ್ತು ಹಿಮಾ ಅಶೋಕ್ ಸಮ್ಮಾನಪತ್ರ ವಾಚಿಸಿದರು.
ಶೃಂಗೇರಿಯ ಅಂಧ ಕಲಾವಿದರಿಂದ ರಸಮಂಜರಿ ಗೀತ ಕಾರ್ಯಕ್ರಮ ನಡೆಯಿತು. ಶ್ರೀ ಬಾಹುಬಲಿ ಯುವಜನ ಸಂಘದ ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ಬಿ. ಸ್ವಾಗತಿಸಿ, ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ನಿರ್ವಹಿಸಿದರು. ಪ್ರಮೋದ್ ಕುಮಾರ್ ವಂದಿಸಿದರು.

ಸನ್ಮಾನ : ಗೌರವ ಡಾಕ್ಟರೇಟ್ ಪಡೆದ ಡಾ| ಜಯಕೀರ್ತಿ ಜೈನ್ ಧರ್ಮಸ್ಥಳ, ಪಿಎಚ್‌ಡಿ ಪದವಿ ಗಳಿಸಿದ ಅಂತರಾಷ್ಟ್ರೀಯ ಯೋಗ ತೀರ್ಪುಗಾರ ಡಾ| ಶಶಿಕಾಂತ್ ಜೈನ್, ಉಪನ್ಯಾಸಕಿ ಡಾ| ಚಂದ್ರಪ್ರಭಾ ಅವರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.