ಮುಂಡಾಜೆಯಲ್ಲಿ ಮಾನವ ಹಕ್ಕುಗಳ ದಿನಾಚರಣೆ

ಮುಂಡಾಜೆ: ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಾನವ ಹಕ್ಕುಗಳ ಸಂಘ ಮತ್ತು ಸಮಾಜ ಶಾಸ್ತ್ರ ಸಂಘದ ಜಂಟಿ ಆಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಯಿತು.
ಪ್ರಾಂಶುಪಾಲ ಮುರಳೀಧರ್ ಜಿ.ಎನ್. ಮಾತನಾಡಿ,”ಸರಕಾರದ ಸುತ್ತೋಲೆಯಂತೆ ಮಕ್ಕಳ ಸಂರಕ್ಷಣೆ,ಮಕ್ಕಳ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಸಂಘವನ್ನು ರಚಿಸಲಾಗಿದೆ. ನಾವು ಯಾವುದಕ್ಕೆ ಹಕ್ಕುದಾರರು ಎಂದು ಮೊದಲು ನಾವು ತಿಳಿದಿರಬೇಕು.ಮಕ್ಕಳ ಹಕ್ಕುಗಳನ್ನು ಯಾರೂ ನಿರಾಕರಿಸುವಂತಿಲ್ಲ.ಆದರೆ ನಿಮ್ಮ ಹಕ್ಕುಗಳು ಏನು ಎಂದು ನಿಮಗೆ ಗೊತ್ತಿರಬೇಕು.ಹಕ್ಕುಗಳ ಜೊತೆಗೆ ನಮಗೆ ಇರುವ ಜವಾಬ್ದಾರಿಗಳ ಅರಿವೂ ಇರಬೇಕು”ಎಂದು ನುಡಿದರು.
ವಿದ್ಯಾರ್ಥಿ ಸಂಸತ್ತು ಮತ್ತು ಸಮಾಜಶಾಸ್ತ್ರ ಸಂಘದ ಸಂಚಾಲಕ ಅರವಿಂದ ಚೊಕ್ಕಾಡಿಯವರು ಮಾತನಾಡಿ, “ಹಕ್ಕನ್ನು ಕೇಳುವವನಿಗೆ ಎರಡು ಮೂಲ ಗುಣವಿರಬೇಕು.ಭಯ ಇರಬಾರದು.ಮತ್ತು ಯಾರ ಬಳಿ ಹಕ್ಕನ್ನು ಕೇಳುತ್ತೇವೊ ಅವರನ್ನು ಪ್ರೀತಿಯಿಂದ ಕಾಣಬೇಕು ಹೊರತು ನಮ್ಮ ವಿರೋಧಿ ಎಂದು ಭಾವಿಸಬಾರದು. ಹಕ್ಕುಗಳು ಪ್ರಜಾಸತ್ತೆಯ ಆಧಾರ ಸ್ತಂಭ ಎಂದರು.
ಹಿಂದೂ, ಇಸ್ಲಾಂ, ಬೌದ್ದ, ಕ್ರೈಸ್ತ ಧರ್ಮಗಳಲ್ಲಿ ಹಕ್ಕುಗಳು ಬೆಳೆದ ಕ್ರಮವನ್ನು ತಿಳಿಸಿದ ಅವರು ಮ್ಯಾಗ್ನಾ ಕಾರ್ಟ ಸನ್ನಿದಿನಿಂದ ಆಧುನಿಕ ಮಾನವ ಹಕ್ಕುಗಳು ವಿಕಾಸಗೊಂಡ ರೂಪವನ್ನು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಕಾರ್ಯದರ್ಶಿ ಪ್ರಶಾಂತ್ ವಹಿಸಿದ್ದರು. ಸಂಘದ ಅಧ್ಯಕ್ಷ ಸುಜಿತ್ ಎಂ.ಬಿ.ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.