ಐ.ಎಲ್ ಪಿಂಟೋ ಪತ್ನಿ ನಾಟಿ ಪಂಡಿತೆ ರೀಟಾ ಮರಿಯಾ ಪಿಂಟೋ ನಿಧನ

ಕೊಯ್ಯೂರು: ಇಲ್ಲಿನ ಕೊಪ್ಪದಬೈಲು ನಿವಾಸಿ ಕೃಷಿಕ ಮತ್ತು ಸಮಾಜ ಸೇವಕರಾಗಿರುವ ಐ. ಎಲ್ ಪಿಂಟೋ ಅವರ ಧರ್ಮಪತ್ನಿ ರೀಟಾ ಮರಿಯಾ ಪಿಂಟೋ (62.ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಜ. 19 ರಂದು ಬೆಂಗಳೂರಿನ ಪುತ್ರಿಯ ಮನೆಯಲ್ಲಿ ನಿಧನರಾಗಿದ್ದಾರೆ.
ಉತ್ತಮ ಕೃಷಿಕರಾಗಿರುವ ಪತಿಯ ಜೊತೆಗೆ ತಾನೂ ಪೂರ್ಣಕಾಲಿಕ ಕೃಷಿಯಲ್ಲಿ ತೊಡಗಿಕೊಂಡಿದ್ದ ಆದರ್ಶ ಗೃಹಿಣಿಯೂ ಆಗಿದ್ದ ರೀಟಾ ಅವರು ಕಾಯಿಲೆಗಳಿಗೆ ನಾಟಿ ಔಷಧಿ ನೀಡುತ್ತಾ ನಾಟಿ ಪಂಡಿತೆಯಾಗಿಯೂ ಗುರುತಿಸಿಕೊಂಡಿದ್ದರು. ಮೃತರು ಪತಿ ಸಹಿತ, ಇಬ್ಬರು ಪುತ್ರಿಯರಾದ ವಿನುತಾ ಸಿಲ್ವಿಯಾ ಪಿಂಟೋ, ವಿವಿತಾ ಸುಪ್ರಿಯಾ ಪಿಂಟೋ, ಏಕೈಕ ಪುತ್ರ ವಿವೇಕ್ ಫ್ರಾನ್ಸಿಸ್ ಪಿಂಟೋ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವನ್ನು ಜ. 20 ರಂದು ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ವಠಾರದಲ್ಲಿ ಕೈಗೊಳ್ಳಲಾಯಿತು.

About The Author

Related posts

1 Comment

Leave a Reply

Your email address will not be published. Required fields are marked *

Copy Protected by Chetan's WP-Copyprotect.