ಎಸ್.ಡಿ.ಎಮ್ ಪ.ಪೂ ಕಾಲೇಜಿನ ಸಂಸ್ಕೃತ ವಿಭಾಗದ ಸಂಸ್ಕೃತ ಸಂಘದ ಸಮಾರೋಪ

ಉಜಿರೆ: ಸಂಸ್ಕೃತ ವಿಶ್ವ ಭೂಪುಟದಲ್ಲಿ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದು. ಅತ್ಯಂತ ಮಧುರವಾದ ಹಾಗೂ ನಮ್ಮ ಸಂಸ್ಕೃತಿಯ ಭಾಷೆಯಾಗಿರುವುದು. ಇದು ಜನಸಾಮಾನ್ಯರ ಭಾಷೆಯಾಗಬೇಕು. ಶಾಲಾ ಕಾಲೇಜುಗಳಲ್ಲಿ ಸಂಸ್ಕೃತ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಉಜಿರೆಯ ಎಸ್.ಡಿ.ಎಮ್ ಪ.ಪೂ ಕಾಲೇಜಿನ ಪ್ರಾಚಾರ್ಯ ಪ್ರೊ.ದಿನೇಶ್ ಚೌಟ ಹೇಳಿದರು.  ಇವರು ಎಸ್.ಡಿ.ಎಮ್ ಪ.ಪೂ ಕಾಲೇಜಿನ ಸಂಸ್ಕೃತ ವಿಭಾಗದ ಸಂಸ್ಕೃತ ಸಂಘದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎಸ್.ಡಿ.ಎಮ್ ಪದವಿ ಕಾಲೇಜಿನ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಮಚಂದ್ರ ಪುರೋಹಿತ್ ಅಭ್ಯಾಗತರಾಗಿ ಮಾತನಾಡಿ ಸಂಸ್ಕೃತ ನಮ್ಮ ದೇಶದ ದೊಡ್ಡ ಸಂಪತ್ತು ಇದು ಎಲ್ಲರನ್ನೂ ಬೆಸೆಯುವ ಭಾಷೆ ಎಂದು ನುಡಿದರು.
ಎಸ್.ಡಿ.ಎಮ್ ಪದವಿ ಕಾಲೇಜಿನ ಶಿಕ್ಷಕೇತರ ಸಿಬಂದಿ, ಯಕ್ಷಗಾನ ಅರ್ಥಧಾರಿ ಹಾಗೂ ಲೇಖಕ ಸದಾನಂದ ಮುಂಡಾಜೆಯವರು ಪುರಾಣ ಹಾಗೂ ವಾಸ್ತವವದ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು.
ಇದೆ ಸಂದರ್ಭದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ್ ಐತಾಳ್ ಇವರನ್ನು ವಿದ್ಯಾರ್ಥಿಗಳ ಪರವಾಗಿ ಅಭ್ಯಾಗತರು ಸನ್ಮಾನಿಸಿದರು. ವಿಶೇಷ ಸಾಧಕ ವಿದ್ಯಾರ್ಥಿಗಳಾದ ಅಕ್ಷತಾ, ಭಾರ್ಗವಿ, ಪೂರ್ಣಿಮಾ ಹಾಗೂ ಸಂಸ್ಕೃತ ಸಂಘದ ಅಧ್ಯಕ್ಷ ಶ್ರೇಯಸ್ ಪಾಳಂದೆಯವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷೆ ದೀಕ್ಷಾ ಉಪಸ್ಥಿತರಿದ್ದರು. ಅಮೃತ್ ಸ್ವಾಗತಿಸಿ, ಶ್ರೇಯಸ್ ಪಾಳಂದೆ ವಂದಿಸಿದರು. ನಿಸ್ತರಾ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.