ಗುರುವಾಯನಕೆರೆ: ಗ್ರಾಹಕರ ನೆಪದಲ್ಲಿ ಕಳ್ಳತನ; ಆರೋಪಿಗಳ ಬಂಧನ

ಗುರುವಾಯನಕೆರೆ: ಇಲ್ಲಿಯ ಕುಲಾಲ ಮಂದಿರ ಸಮೀಪದ ಅಂಗಡಿಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರಿಬ್ಬರು ಅಂಗಡಿಯೊಳಕ್ಕೆ ನುಗ್ಗಿ ಅಂಗಡಿ ಮಾಲೀಕರ ಬ್ಯಾಗನ್ನು ದೋಚಿ ಪರಾರಿಯಾಗುತ್ತಿದ್ದ ವೇಳೆ, ಪೊಲೀಸರ ಬಂಧನಕ್ಕೊಳಗಾದ ಘಟನೆ ಜ.18 ರಂದು ನಡೆದಿದೆ.
ಹಾಸನ ಮೂಲದ ಅಮಾನುಲ್ಲಾ ಖಾನ್ ಮತ್ತು ಮಹಮ್ಮದ್ ಇಕ್ಬಾಲ್ ಪೊಲೀಸ್ ಬಂಧನಕ್ಕೊಳಗಾದ ಆರೋಪಿಗಳು.
ಘಟನೆಯ ವಿವರ: ಜ.18 ರಂದು ಕುಲಾಲ ಮಂದಿರದ ಬಳಿ ಇರುವ ಸುದ್ದಿಪತ್ರಿಕೆ ವಿತರಕಿ ದಯಾ ಮಾಧವರವರ ಅಂಗಡಿಗೆ ನುಗ್ಗಿದ್ದ ಆರೋಪಿಗಳು, 22.ಸಾವಿರ ರೂ ಮೌಲ್ಯದ 10ಗ್ರಾಂ. ತೂಕದ ಬಂಗಾರದ ನೆಕ್ಲೆಸ್ ಹಾಗೂ 500 ರೂ. ಬೆಲೆಯ ಮೊಬೈಲ್ ಇದ್ದ ಬ್ಯಾಗ್‌ನ್ನು ಕಳವುಗೈದು ಕಾರಿನಲ್ಲಿ ಪರಾರಿಯಾಗಿದ್ದರು.
ಈ ಸಂದರ್ಭ ಸ್ಥಳೀಯ ಬೀಟ್ ಸಿಬ್ಬಂದಿ ಅರುಣ್‌ರವರು ಪರಾರಿಯಾದ ಕಾರಿನ ಬಣ್ಣ ಹಾಗೂ ಗಾಡಿಯ ನಂಬರ್‌ನ್ನು ಕೂಡಲೇ ಪೊಲೀಸ್ ಅಧಿಕಾರಿ ಅಶೋಕ್‌ರವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತರಾದ ಪೊಲೀಸ್ ಅಧಿಕಾರಿ ಬೈಕಿನಲ್ಲಿ ತೆರಳಿ ಬೆಳ್ತಂಗಡಿ ಸಂತೆಕಟ್ಟೆಯ ಬಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಆರೋಪಿಗಳು ಕಳುವುಗೈದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.