ಎಸ್.ಡಿ.ಎಂ. ಸಿ.ಬಿ.ಎಸ್.ಇ. ಶಾಲೆಯಲ್ಲಿ ಲಿಪ್ಪನ್ ಕಲೆಯ ಕಾರ್ಯಾಗಾರ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ(ಸಿ.ಬಿ.ಎಸ್.ಇ.), ಉಜಿರೆ ಇಲ್ಲಿಯ ಸಾಂಸ್ಕೃತಿಕ ಸಂಘ ಕಲಾ ಸಿಂಧು ಇದರ ಆಶ್ರಯದಲ್ಲಿ ಭಾರತದ ಪ್ರಸಿದ್ಧ ಕರಕುಶಲ ಕಲೆ, ‘ಲಿಪ್ಪನ್ ಕಾಮ್’ ನ ಕಾರ್ಯಾಗಾರ ನಡೆಯಿತು. ಸಂಘದ ಸಂಯೋಜಕ ಶಿಕ್ಷಕಿ ಶ್ರೀಮತಿ ಸುಮಾ ಶ್ರೀನಾಥ್ ಅವರು ಲಿಪ್ಪನ್ ಕಲೆಯ ಮಾಹಿತಿಯನ್ನು ನೀಡಿ, ಪ್ರಾತ್ಯಕ್ಷಿಕೆಯ ಮುಖಾಂತರ ಲಿಪ್ಪನ್ ಕಲೆಯನ್ನು ತಯಾರಿಸುವುದನ್ನು ತಿಳಿಸಿಕೊಟ್ಟರು. ವಿದ್ಯಾರ್ಥಿಗಳು ಆಕರ್ಷಣೀಯ ಲಿಪ್ಪನ್ ಕಲೆಗಳನ್ನು ತಯಾರಿಸಿ ಪ್ರದರ್ಶನಕಿಟ್ಟರು. ಶಾಲಾ ಪ್ರಾಂಶುಪಾಲರಾದ  ಮನಮೋಹನ್ ನಾಯ್ಕ್ ವಿದ್ಯಾರ್ಥಿಗಳ ಲಿಪ್ಪನ್ ಕಲೆಗಳನ್ನು ಮೆಚ್ಚಿ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಘದ ಸಂಯೋಜಕರಾದ  ಹರೀಶ್ ಬಳಂಜ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.