ಕಡಿರುದ್ಯಾವರದಲ್ಲಿ ಶ್ರೀ ರಾಮಾಂಜನೇಯ ಟ್ರೋಫಿ ಕಬಡ್ಡಿ ಪಂದ್ಯಾಟ

Advt_NewsUnder_1
Advt_NewsUnder_1

ಕಡಿರುದ್ಯಾವರ: ಶ್ರೀರಾಮಾಂಜನೇಯ ದೇವಸ್ಥಾನ ಕಡಿರುದ್ಯಾವರ ಕಾನರ್ಪ ಇವರ ವತಿಯಿಂದ ತಾ|ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದೊಂದಿಗೆ ತಾ|ಮಟ್ಟದ ಹೊನಲು ಬೆಳಕಿನ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಸುಲ್ತಾನ್ ಎಟೇಕರ್‍ಸ್ ಸುನ್ನತ್‌ಕೆರೆ ಪ್ರಥಮ, ರಾಮಾಂಜನೇಯ ಫ್ರೆಂಡ್ಸ್ ಕಾನರ್ಪ ದ್ವಿತೀಯ, ಕುಪ್ಪೆಟ್ಟಿ ಫ್ರೆಂಟ್ಸ್ ತೃತೀಯ ಮತ್ತು ಚಿರಂಜೀವಿ ಕಾನರ್ಪ ಚತುರ್ಥ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿತು.
ಪಂದ್ಯಾಕೂಟದ ಉದ್ಘಾಟನೆಯನ್ನು ಮಾಜಿ ಶಾಸಕ ವಸಂತ ಬಂಗೇರ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಎಸ್‌ಪಿ ಪೀತಾಂಬರ ಹೇರಾಜೆ, ನಿವೃತ್ತ ಮೇಜರ್‌ಜನರಲ್ ಎಂ.ವಿ ಭಟ್, ಉದ್ಯಮಿ ಕೆ.ಎ ಜಯಚಂದ್ರ ಮಂಗಳೂರು, ಕೆಪಿಟಿಸಿಎಲ್ ಉಪಲೆಕ್ಕಪರಿಶೋಧಕ ಮುರಳೀಧರ ನಾಯಕ್, ಶ್ರೀನಿವಾಸ ಪ್ರಭು, ಭೂಸೇನೆಯ ಸೈನಿಕ ಕಮಲಾಕ್ಷ ಗೌಡ, ಜಯಾನಂದ ಶೆಟ್ಟಿ ಮುಂಡ್ರುಪ್ಪಾಡಿ, ಗ್ರಾ.ಪಂ ಸದಸ್ಯ ನಾರಾಯಣ ಗೌಡ ದೇವಸ್ಯ, ಸೇಸಪ್ಪ ಗೌಡ, ರಬ್ಬರ್ ಸೊಸೈಟಿ ಉದ್ಯಮಿ ಬಿ.ಕೆ ಗೋವಿಂದ, ಕೃಷಿಕ ಪೌಲೋಸ್ ನೂಜಿ, ಸಿವಿಲ್ ಗುತ್ತಿಗೆದಾರರಾದ ಕೆ.ಎಂ ಅಬ್ಬಾಸ್ ಮತ್ತು ಚೆನ್ನಕೇಶವ ನಾಯ್ಕ, ಯುವ ಜನತಾದಳ ಅಧ್ಯಕ್ಷ ಸೂರಜ್ ಗೌಡ ವಳಂಬ್ರ, ಮೊದಲಾದ ಗಣ್ಯರು ಭಾಗಿಯಾಗಿದ್ದರು.
ಸನ್ಮಾನ: ಕಾರ್ಯಕ್ರಮದಲ್ಲಿ ಯಕ್ಷದಿಗ್ಗಜ ಮಂಜುನಾಥ ಕಾಮತ್, ಸಹಕಾರಿ ದುರೀಣ ಎನ್.ಎಸ್ ಗೋಖಲೆ, ಬಂಗಾಡಿ ಸಹಕಾರಿ ಸಂಘದ ನಿವೃತ್ತ ಸಿಇಒ ಎ.ಬಿ ಉಮೇಶ್ ಇವರನ್ನು ಸನ್ಮಾನಿಸಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಮಂಜುಷಾ ನಾಯಕ್, ಅಭಿಜಿತ್ ಅವರನ್ನು ಪುರಸ್ಕರಿಸಲಾಯಿತು.
ಕಿಶೋರ್ ಕುಮಾರ್ ಮತ್ತು ಕಿರಣ್ ಕುಮಾರ್ ಸಹೋದರರು ಆಹ್ವಾನಿತರನ್ನು ಗೌರವಿಸಿದರು. ಸಂಘಟಕರಾದ ನಾರಾಯಣ ಪೂಜಾರಿ, ಮಹೇಶ್ ಬಿ, ಹರಿಪ್ರಸಾದ್ ಭಟ್, ಬಾಬು ಪೂಜಾರಿ ಕೂಳೂರು ಮತ್ತು ಸದಸ್ಯರುಗಳು ಸಹಕಾರ ನೀಡಿದರು. ನಾಮದೇವ ರಾವ್ ನಿರೂಪಿಸಿ, ನೇಮಿರಾಜ್ ಗೌಡ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.