HomePage_Banner_
HomePage_Banner_
HomePage_Banner_

ಪಾಲನಾ ಕೇಂದ್ರದ ಮಕ್ಕಳು ಸಾಮೂಹಿಕ ಅಸ್ವಸ್ಥ

ಕಡಿರುದ್ಯಾವರ: ಕಡಿರುದ್ಯಾವರ ನಿರ್ಗತಿಕರ ಕುಟೀರದ 13 ಮಂದಿ ವಿದ್ಯಾರ್ಥಿಗಳಿಗೆ ವಾಂತಿ ಒಮ್ಮಿಂದೊಮ್ಮೆಲೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಎಲ್ಲರನ್ನೂ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಪ್ರಸಂಗ ಜ. 14ರಂದು ರಾತ್ರಿ ನಡೆದಿದೆ.
ನಿಲಯದ ವಿದ್ಯಾರ್ಥಿಗಳಾದ ಅನುಶ್ರೀ(5ವ.), ಬಿಂದ್ಯುಶ್ರೀ (9ವ.), ಸ್ವಾತಿ (11ವ.), ನಿಶಾ (11ವ.) ಪ್ರಣಮ್ಯ (10ವ.), ವನ್ಯಕಲಾ (11ವ.), ತೃಷಾ (9ವ.), ಡಿಂಪಲ್ (8ವ.), ಚೈತ್ರಾ (15ವ.), ಪೂಜಾ (13ವ.), ವಂದನ್ (10ವ.), ಅಶ್ವಿನಿ (16ವ.) ಮತ್ತು ಕಾವ್ಯ(12ವ.) ಎಂಬವರೇ ಆಸ್ಪತ್ರೆಗೆ ದಾಖಲಾದವರು.
ಸೋಮವಾರ ಎಂದಿನಂತೆ ನಿಲಯದ ಆಹಾರ ಸೇವಿಸಿ ಬೇರೆ ಬೇರೆ ಶಾಲೆಗಳಿಗೆ ತೆರಳಿದ್ದ ವಿದ್ಯಾರ್ಥಿಗಳು ಸಂಜೆ ಎಂದಿನಂತೆ ಹಾಸ್ಟೆಲ್‌ಗೆ ಮರಳಿದ್ದು, ಸಂಜೆಯ ವೇಳೆ ಹೊಟ್ಟೆ ತೊಳೆಸಿದಂತಾಗಿ ವಾಂತಿಯಾಗಲು ಪ್ರಾರಂಭವಾಗಿತ್ತು. 19 ಮಂದಿಯ ಪೈಕಿ 13 ಮಂದಿಗೆ ವ್ಯಾದಿ ಕಾಣಿಸಿಕೊಂಡಾಗ ಅವರನ್ನು ತಕ್ಷಣ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದ್ದು ಎಲ್ಲರೂ ಚೇತರಿಸಿಕೊಂಡಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪಾಲನಾ ಕೇಂದ್ರದ ಮುಖ್ಯಸ್ಥೆ ಲೋಕೇಶ್ವರೀ ವಿನಯಚಂದ್ರ ಅವರು, ನಮ್ಮ ಪಾಲನಾ ಕೇಂದ್ರದಲ್ಲಿ ಸಿಸಿ ಟಿ.ವಿ ಭದ್ರತೆ ಸಹಿತ ಎಲ್ಲಾ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಸ್ನಾನ ಮತ್ತು ಕುಡಿಯಲೂ ಕೂಡ ಬಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಹೀಗಿರುವಂತೆ ಯಾವ ಆಹಾರದಲ್ಲಿ ಅವರಿಗೆ ಏರುಪೇರಾಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಮಕ್ಕಳ ಬಗ್ಗೆ ನಮ್ಮ ಸಮಿತಿ ಬಹಳ ಕಾಳಜಿ ವಹಿಸುತ್ತಿದೆ ಎಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.