ಕೊಕ್ಕಡ : ಜ.13 ರಂದು ಕೊಕ್ಕಡ ಗ್ರಾಮದ ಅಡೈ ಬಳಿ ಕೊಕ್ಕಡ ಗ್ರಾ. ಪಂಚಾಯತಿನ ತ್ಯಾಜ್ಯ ವಿಲೇವಾರಿ ಘಟಕವು ಶನಿವಾರ ರಾತ್ರಿ 8ರ ಸುಮಾರಿಗೆ ಸಂಭವಿಸಿದ ದುರಂತದಲ್ಲಿ ಬೆಂಕಿಗಾಹುತಿಯಾಗಿದೆ.
ಕೊಕ್ಕಡ ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಈ ಘಟಕವು 3 ವರ್ಷಗಳ ಹಿಂದೆ ಪ್ರಾರಂಭವಾಗಿದೆ. ವರ್ಷದ ಹಿಂದೆ ಖಾಸಗಿ ವ್ಯಕ್ತಿಯೊಬ್ಬರು ಟೆಂಡರು ವಹಿಸಿಕೊಂಡಿದ್ದರು. ಕೊಕ್ಕಡ ಪೇಟೆಯಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಇಲ್ಲೇ ವಿಲೇವಾರಿ ಮಾಡಲಾಗುತ್ತಿತ್ತು. ಶನಿವಾರ ರಾತ್ರಿ ಇದಕ್ಕೆ ಬೆಂಕಿ ಸ್ಪರ್ಶವಾಗಿರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ನೋಡಿ ಆಸುಪಾಸಿನವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪರಿಸರದ ಮನೆಯವರು ಧಾವಿಸಿ ಬೆಂಕಿಯು ಕಟ್ಟಡದ ಹೊರಗೆ ಹೋಗದಂತೆ ನೋಡಿಕೊಂಡರು.
ಇಲ್ಲಿ ಸಂಗ್ರಹಿಸಿಡಲಾಗಿದ್ದ ಅಪಾರ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳು ಸುಟ್ಟು ಹೋಗಿದ್ದು ಕಟ್ಟಡದ ಸಿಮೆಂಟ್ ಮೇಲ್ಛಾವಣಿ ಕರಟಿ ಹೋಗಿದೆ. ಕಟ್ಟಡಕ್ಕೂ ಹಾನಿಯಾಗಿದ್ದು ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ.