ಮುಂಡಾಜೆಯಲ್ಲಿ “ಕೀರ್ತನ ಕಲೋತ್ಸವ”: ಸಾಧಕರಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೀರ್ತನಾ ಕಲಾತಂಡ ಮುಂಡಾಜೆ ಇದರ ಆಶ್ರಯದಲ್ಲಿ ಮುಂಡಾಜೆ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಭಾರ್ಗವ ಸಭಾಮಂಟಪದಲ್ಲಿ ಆರಾಧನೆ- ಸಂಕೀರ್ತನೆ-ಗುರುವಂದನೆ- ಅಭಿನಂದನೆ-ಮನೋರಂಜನೆಗಳೆಂಬ ಶಿರ್ಷಿಕೆಯಡಿಯಲ್ಲಿ ಕೀರ್ತನ ಕಲೋತ್ಸವ-2019 ಕಲೆಗಳ ಕಲರವ ಎಂಬ ವಿನೂತನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನವಾಗಿದ್ದ ಈ ಉತ್ಸವದಲ್ಲಿ, ಸಾಮೂಹಿಕ ಶ್ರೀ ಶನೈಶ್ಚರ, ಶ್ರೀ ಸತ್ಯನಾರಾಯಣ ಹಾಗೂ ಶ್ರೀ ಧನ್ವಂತರಿ ಪೂಜೆ, ಗಾಯನ-ವಾದನ-ನರ್ತನ ಕಾರ್ಯಕ್ರಮ ನಡೆಯಿತು.
ಗುರುವಂದನೆ, ಸಾಧಕರಿಗೆ ಸನ್ಮಾನ:
ಮುಂಡಾಜೆ ಶಾಲೆ ನಿವೃತ ಶಿಕ್ಷಕಿ ಎ.ಎಸ್ ವಿಜಯಮ್ಮ ಅವರಿಗೆ ಗುರುವಂದನೆ ನಡೆಸಲಾಯಿತು.
ಕೃಷಿ ಮತ್ತು ಸಮಾಜ ಸೇವೆಗಾಗಿ ಗೋಪಾಲಕೃಷ್ಣ ಜೋಷಿ ಕಾಂತ್ಲ, ರಂಗಭೂಮಿ ಸೇವೆಗಾಗಿ ಮಧುಕರ ರಾವ್ ಕಕ್ಕಿಂಜೆ, ಸಾಹಿತ್ಯ ಬಾಲಕೃಷ್ಣ ಸಹಸ್ರಬುದ್ಧ್ಯೆ, ಸಮಾಜ ಸೇವೆ ಜಯರಾಮ ಶೆಟ್ಟಿ ನೆಯ್ಯಾಲು, ನಾಟಿ ವೈದ್ಯೆ ಸೇಸಮ್ಮ ಇವರನ್ನು ಸನ್ಮಾನಿಸಲಾಯಿತು. ಬಾಲಪ್ರತಿಭೆ ಪುನೀತ್ ಶೆಟ್ಟಿ ಅಗರಿ ಅವರುಗೆ ಅಭಿನಂದನೆ ಸಲ್ಲಿಸಲಾಯಿತು
ಪ್ರತಿಭಾ ಪುರಸ್ಕಾರ ವಿಭಾಗದಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದ ಅನುಷಾ, ಕೀರ್ತನಾ ಕಲಾತಂಡದ ಬಾಲ ಕಲಾವಿದರಾದ ಅಕ್ಷತಾ, ನಕ್ಷಿತಾ, ಅಕ್ಷತಾ, ವೈತನ್ಯಾ, ಪ್ರದೀಪ್ ಅವರಿಗೆ ಪುರಸ್ಕಾರ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಎನ್. ಎಸ್ ಗೋಖಲೆ ವಹಿಸಿದ್ದರು. ಮಿಲ್ಕ್ ಸೊಸೈಟಿ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಪರಶುರಾಮ ದೇವಳದ ಆಡಳಿತ ಮೊಕ್ತೇಸರ ಅಡೂರು ವೆಂಕಟ್ರಾಯ, ಗೋಪಾಲಕೃಷ್ಣ ರಾಯ ಅಡೂರು, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಬಾಬು ಪೂಜಾರಿ ಕೂಳೂರು, ರಾಮಣ್ಣ ಶೆಟ್ಟಿ ಅಗರಿ, ನಾಮದೇವ ರಾವ್, ನಾರಾಯಣ ಶೆಟ್ಟಿ, ಶಾಲಿನಿ ವಿಜಯಕುಮಾರ್, ಬಾಲಕೃಷ್ಣ ಪಡಾರು, ಉಮೇಶ್ ಆಚಾರ್ಯ, ಸುಧೀರ್ ಪರಾಂಜಪೆ, ಆನಂದ ಮಂಜುಶ್ರೀನಗರ, ಮೊದಲಾದ ಗಣ್ಯರು , ಸಂಘಟಕರು ಭಾಗಿಯಾಗಿದ್ದರು.ಜಯರಾಮ್ ಕೆ ಕಲಾವಿದ ಅಭಿನಂದನಾ ಭಾಷಣ ಮಾಡಿದರು.
ಬಳಿಕ ಸ್ಥಳೀಯ ಪ್ರತಿಭೆಗಳಿಂದ “ಎನ್ನ” ತುಳುಚಿತ್ರ ತಂಡದ ಆಗಮನ, ಕಲ್ಕುಡ ಕಲ್ಲುರ್ಟಿ ಗೀತಾರೂಪ, “ಏತುಂಡಾ ಆತೆ”ತುಳು ನಾಟಕ ಪ್ರದರ್ಶನ ಸಮಾರಂಭದ ಭಾಗಗಳಾಗಿದ್ದವು. ನಾರಾಯಣ ಫಡ್ಕೆ ಮತ್ತು ಹೇಮಾವತಿ ಕೆ ಕಾರ್ಯಕ್ರಮ ನಿರೂಪಿಸಿದರು. ಕೀರ್ತನ ಕಲಾ ತಂಡದ ಮುಖ್ಯಸ್ಥ ಹಾಗೂ ಕವಿ ಸದಾನಂದ ಬಿ ಮುಂಡಾಜೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೆನ್ನಕೇಶವ ನಾಯ್ಕ ವಂದನಾರ್ಪಣೆಗೈದರು. ಕಾರ್ಯಕ್ರಮಕ್ಕೆ ನೆರವು ನೀಡಿದ ಪ್ರಾಯೋಜಕರ ಹೆಸರನ್ನು ಪುರಷೋತ್ತಮ ಶೆಟ್ಟಿ ದಂಪತಿ ಅಗರಿ ಇವರು ವಿಶೇಷ ಮುತುವರ್ಜಿ ವಹಿಸಿ ತಮ್ಮ ಸ್ವಂತ ಖರ್ಚಿನಲ್ಲಿ ಎಲ್.ಸಿ.ಡಿ ಪರದೆಯಲ್ಲಿ ಪ್ರದರ್ಶಿಸಿ ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.