HomePage_Banner_
HomePage_Banner_

ವಸಂತ ಬಂಗೇರರ 74 ನೇ ಹುಟ್ಟುಹಬ್ಬ: ಅಭಿಮಾನಿಗಳಿಂದ ರಕ್ತದಾನ ಶಿಬಿರ

 ಬೆಳ್ತಂಗಡಿ: ರಕ್ತದಾನ ದಾನಗಳಲ್ಲಿ ಶ್ರೇಷ್ಟವಾದದ್ದು. ಒಬ್ಬ ರಕ್ತದಾನಿಯ ದಾನದಿಂದ ನಾಲ್ಕು ಮಂದಿಯ ಜೀವ ರಕ್ಷಣೆ ಸಾಧ್ಯ ಎಂದು ವೈದ್ಯರು ಈಗಲೇ ತಿಳಿಸಿದ್ದಾರೆ. ನನಗೆ ಈ ರೀತಿ ನನ್ನ ಹುಟ್ಟುಹಬ್ಬದ ಆಚರಣೆ ಇಷ್ಟವಿಲ್ಲ. ಆದರೆ ರಕ್ತದಾನದ ಕಾರ್ಯಕ್ರಮದ ಮೂಲಕ ಆಚರಣೆಗೆ ವ್ಯವಸ್ಥೆ ಮಾಡಿದ ನ್ಯಾಯವಾದಿ ಮನೋಹರ್ ಅವರು ಅನೇಕ ಮಂದಿಗೆ ರಕ್ತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ನನಗೆ ಹೆಮ್ಮೆಯಾಗಿದೆ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.
ವಸಂತ ಬಂಗೇರರ 74 ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಆಶಾಸಾಲಿಯಾನ್ ಸಭಾಂಗಣದಲ್ಲಿ ಜ. 15 ರಂದು ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ರಾಜಶೇಖರ ಕೋಟ್ಯಾನ್ ಮಾತನಾಡಿ, ವಸಂತ ಬಂಗೇರರು ಜಾತಿ ಧರ್ಮ ಭೇದವಿಲ್ಲದೆ ಸ್ಪಂದಿಸುವ ಮನಸ್ಸುಳ್ಳವರು. ಅವರು ಮಾಡಿದ ಜನಸೇವೆ ಬೆಳ್ತಂಗಡಿಯಲ್ಲಿ ಅಮರ ಎಂದರು.
ಅತಿಥಿಗಳಾಗಿದ್ದ ನಿವೃತ ಎಸ್‌ಪಿ ಪೀತಾಂಬರ ಹೇರಾಜೆ, ಬಿಷಪ್ ಹೌಸ್‌ನ ಧರ್ಮಗುರುಗಳಾದ ರೆ. ಫಾ ಬಿನೋಯ್ ಜೋಸೆಫ್, ತಾ| ಕಬಡ್ಡಿ ಅಸೋಸಿಯೇಶನ್ ಕಾರ್ಯಾಧ್ಯಕ್ಷ ರಾಜಶೇಖರ ಶೆಟ್ಟಿ ಮಡಂತ್ಯಾರು, ವೆನ್ಲಾಕ್ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ. ಶರತ್ ಶುಭ ಕೋರಿದರು. ವೇದಿಕೆಯಲ್ಲಿ ಜಿ.ಪಂ ಸದಸ್ಯ ಶೇಖರ್ ಕುಕ್ಕೇಡಿ ಮತ್ತು ಪಿ ಧರಣೇಂದ್ರ ಕುಮಾರ್, ಸುಜಿತಾ ವಿ ಬಂಗೇರ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರುಗಳು ಭಾಗಿಯಾಗಿ ಶುಭ ಕೋರಿದರು.
ಕಾರ್ಯಕ್ರಮ ಸಂಘಟಕರಾಗಿದ್ದ ನ್ಯಾಯವಾದಿ ಮನೋಹರ ಕುಮಾರ್ ಇಳಂತಿಲ ಸ್ವಾಗತಿಸಿದರು. ಅನೂಪ್ ವೇಣೂರು ನಿರೂಪಿಸಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನಗರ ಅಧ್ಯಕ್ಷ ಬಿ ಅಶ್ರಫ್ ನೆರಿಯ ವಂದಿಸಿದರು. ಅನುಜ್ಞಾ ಸಾಲಿಯಾನ್ ಇಳಂತಿಲ ಪ್ರಾರ್ಥನೆ ಹಾಡಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.