ಪಾರಸ್ ಪೃಥ್ವಿ ಜ್ಯುವೆಲ್ಸ್‌ನಲ್ಲಿ ಲಯನ್ಸ್ ಸ್ನೇಹ ಕೂಟ

ಆದರ್ಶ ದಂಪತಿ ಬಹುಮಾನ ಪಡೆದ ವಸಂತ ಸುವರ್ಣ ದಂಪತಿಗೆ ಬಹುಮಾನ ವಿತರಿಸಲಾಯಿತು

ಬೆಳ್ತಂಗಡಿ : ಪಾರಸ್ ಪೃಥ್ವಿ ಜ್ಯುವೆಲ್ಸ್ ಬೆಳ್ತಂಗಡಿ ಮಳಿಗೆಯಲ್ಲಿ ಗ್ರಾಹಕರ ಸಂಪರ್ಕ ಮತ್ತು ಸಾರ್ವಜನಿಕರೊಂದಿಗೆ ಬಾಂಧವ್ಯ ವೃದ್ಧಿ ಯೋಜನೆಯ ಭಾಗವಾಗಿ ಅಂತರಾಷ್ಟ್ರೀಯ ಸೇವಾಸಂಸ್ಥೆ ಲಯನ್ಸ್ ಕ್ಲಬ್ ಸದಸ್ಯರೊಂದಿಗೆ ಸ್ನೇಹ ಕೂಟ ಮತ್ತು ಒಂದು ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಸಂದೀಪ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷೆ ಮೇದಿನಿ. ಡಿ ಗೌಡ, ಕೋಶಾಧಿಕಾರಿ ಮಂಜುನಾಥ್ ವೇದಿಕೆಯಲ್ಲಿದ್ದರು. ಲಯನ್ಸ್ ಕ್ಲಬ್ ವಯಾಧ್ಯಕ್ಷ ಧರಣೇಂದ್ರ. ಕೆ. ಜೈನ್ ಸಂಪನ್ಮೂಲ ವ್ಯಕ್ತಿಯಾಗಿದ್ದು ‘ಬದಲಾವಣೆಗಾಗಿ ನಾವು’ ಇದರ ಬಗ್ಗೆ ಉಪನ್ಯಾಸ ನೀಡಿದರು.
ಲಯನ್ಸ್ ಸದಸ್ಯರಿಗಾಗಿ ಪಿಕ್ ಆಂಡ್ ಸ್ಪೀಚ್, ಆದರ್ಶ ದಂಪತಿ, ಮತ್ತು ಅದೃಷ್ಟವಂತ ಲಯನ್ ಸದಸ್ಯ ಆಟಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಾದ ವಸಂತ ಸುವರ್ಣ ವಾರಿಜಾ ದಂಪತಿಗೆ ಬಹುಮಾನ ವಿತರಣೆ ನಡೆಯಿತು. ಎಂ.ಜಿ.ಶೆಟ್ಟಿ , ರುಕ್ಮಿಣಿ ಶೆಟ್ಟಿ ದಂಪತಿ, ಸುಶೀಲಾ ಎಸ್ ಹೆಗ್ಡೆ, ವಸಂತ ಶೆಟ್ಟಿ, ವಿ.ಆರ್.ನಾಯಕ್, ಸೆರಾಫಿನಾ ಡಿ?ಸೋಜ, ಜಿತ್ರೇಶ್ ಶೆಟ್ಟಿ, ವಸಂತ ಶೆಟ್ಟಿ, ಸುರೇಶ್ ಶೆಟ್ಟಿ ಲಾಲ, ಅಶ್ರಫ್ ಆಲಿಕುಂಞ ಸಕ್ರಿಯವಾಗಿ ಭಾಗಿಯಾಗಿದ್ದರು.
ಮೂರೂ ಸ್ಪರ್ಧೆಗಳಲ್ಲಿ ವಸಂತ ಸುವರ್ಣ ಜಯಗಳಿಸಿದ್ದು ವಿಶೇಷವಾಗಿತ್ತು. ನಿಸಾರ್ ಗುರುವಾಯನಕೆರೆ ಕಾರ್ಯಕ್ರಮ ಸಂಯೋಜಿಸಿದ್ದರು. ಭಾನುಪ್ರಕಾಶ್ ಶೆಟ್ಟಿ, ಉಮಾನಾಥ ಪ್ರಭು, ಹರಿಪ್ರಸಾದ್, ವಿನಯ ಕುಮಾರ್, ಪುನೀತಾ, ಶಿಲ್ಪಾ, ಅನ್ವಿತಾ, ರಕ್ಷಾ, ಸುನೀತಾ ಮೊದಲಾದವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.