ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಬೃಹತ್ ರಕ್ತದಾನ ಶಿಬಿರ

ಉಜಿರೆ : ಉಜಿರೆ ಜನಾರ್ದನ ಸ್ವಾಮಿ ಸೇವಾ ಸಂಘ  ಇದರ ನೇತೃತ್ವದಲ್ಲಿ ಮಂಗಳೂರಿನ ಕೆ.ಎಂ.ಸಿ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ 156 ನೇ ಜನ್ಮದಿನಾಚರಣೆ ಪ್ರಯುಕ್ತ ಜ.13 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಶಿಬಿರ ಆಯೋಜನೆಯಲ್ಲಿ ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್, ಬೆಳ್ತಂಗಡಿ ತಾಲೂಕು ಸಪಲ್ಯರ ಯಾನೆ ಗಾಣಿಗರ ಸಂಘ,  ಸಂಗಮ ಫ್ರೆಂಡ್ಸ್ ಇಚ್ಚಿಲ ಬೆಳ್ತಂಗಡಿ ತಾ| ಸ್ಥಾನಿಕ ಬ್ರಾಹ್ಮಣ ಸಭಾ,  ತುಳು ಶಿವಳ್ಳಿ ಸಭಾ ಉಜಿರೆ ವಲಯ, ಶಿವಳ್ಳಿ ವಿಪ್ರ ಯುವ ವೇದಿಕೆ, ರೋಟರಿ ಕ್ಲಬ್ ಬೆಳ್ತಂಗಡಿ, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಬೆಳ್ತಂಗಡಿ ತಾಲೂಕು ಮಡಿವಾಳರ ಸಂಘ, ಸಿಂಧೂ ಇಲೆಕ್ಟ್ರಿಕಲ್ಸ್, ದಿಶಾ ಫುಡ್ ಕಾರ್ನರ್, ಪತಂಜಲಿ ಚಿಕಿತ್ಸಾಲಯ, ಸುರಕ್ಷಾ ಮೆಡಿಕಲ್ಸ್, ಮೊದಲಾದ ಸಂಘಟನೆಗಳು ಕೈ ಜೋಡಿಸಿದ್ದವು.
ಶಿಬಿರವನ್ನು ಜನಾರ್ದನ ಸೇವಾ ಟ್ರಸ್ಟ್ ಹಾಗೂ ತುಳು ಶಿವಳ್ಳಿ ಸಭಾ ಉಜಿರೆ ವಲಾಯಾಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ ಅಧ್ಯಕ್ಷತೆ ವಹಿಸಿ ಶಿಬಿರದ ಪೂರ್ಣ ಪ್ರಯೋಜನ ಪಡೆಯುವಂತೆ ಕರೆ ನೀಡಿದರು. ಸಮಾರಂಭದಲ್ಲಿ ಲಕ್ಷ್ಮಣ ಸಪಲ್ಯ, ಜಗದೀಶ್ ಪ್ರಸಾದ್, ಅರುಣ್ ಕುಮಾರ್, ರಾಘವೇಂದ್ರ ಬೈಪಡಿತ್ತಾಯ , ಸೇವಾ ಭಾರತಿ ಕಾರ್ಯದರ್ಶಿ ವಿನಾಯಕ್ ರಾವ್ ಕನ್ಯಾಡಿ, ಶ್ರೀಧರ ಕೆ.ವಿ ದಿನೇಶ್ ಕುಮಾರ್, ದುರ್ಗಾಪ್ರಸಾದ್ ಕೆಮ್ಮುಣ್ಣಾಯ, ಕೆ.ಎಂ.ಸಿ ಡಾ| ಅನುರಾಗ್ ಮೊದಲಾದವರು ಉಪಸ್ಥಿತರಿದ್ದರು. ಬಿಢೆ ಧನಂಜಯ ರಾವ್ ಶಿಬಿರ ಉದ್ಘಾಟಿಸಿದರು. ವಿನಾಯಕ್ ರಾವ್ ಕಾರ್ಯಕ್ರಮ ನಿರೂಪಿಸಿ ಶ್ರೀಧರ ಕೆ.ವಿ ಸ್ವಾಗತಿಸಿ ರಾಘವೇಂದ್ರ ಬೈಪಡಿತ್ತಾಯ ವಂದಿಸಿದರು. ಒಟ್ಟು ೯೯ ಯುನಿಟ್ ರಕ್ತ ಸಂಗ್ರಹವಾಗಿದ್ದು. ವಿನಾಯಕ್ ರಾವ್ ರಕ್ತದಾನ ಮಾಡಿ 100ಯುನಿಟ್ ಸಂಗ್ರಹಿಸಿ ಮಾನವೀಯತೆ ಮೆರೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.