ಗುರುವಾಯನಕೆರೆ ಸಮೀಪ ಕಾರು ಅಪಘಾತ

ಗುರುವಾಯನಕೆರೆ: ಗುರುವಾಯನಕೆರೆ ಸಮೀಪ ಕೆರೆಯ ತಿರುವಿನ ಬಳಿ Xcent (KA.31N 0366) ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಘಟನೆ ಇಂದು(ಜ.14)ಮುಂಜಾನೆ ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಯ ಸಮೀಪದ ಮನೆಯೊಂದರ ಬಳಿ ಇರುವ ತೆಂಗಿನ ಮರಕ್ಕೆ ಡಿಕ್ಕಿಹೊಡೆದಿದ್ದು, ಕಾರಿನಲ್ಲಿ ಸಂಚರಿಸುತ್ತಿದ್ದ ಶಿರಸಿ ನಿವಾಸಿಗಳಾದ ರತ್ನಾಕರ, ನಾಗರಾಜ, ಮಂಜುಶ್ರೀ, ತುಳಸಿ ಇವರುಗಳಿಗೆ ಗಾಯಗಳಾಗಿವೆ. ಇವರನ್ನು ಹತ್ತಿರದ ಅಭಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.