ಉಜಿರೆ ನಗರದಲ್ಲಿ’ ರಾಷ್ಟ್ರ ಸೇವಿಕಾ ಸಮಿತಿ’ ಪಥ ಸಂಚಲನ

Advt_NewsUnder_1
Advt_NewsUnder_1
Advt_NewsUnder_1
ಪ್ರಾಂತ ಸಂಪರ್ಕ ಪ್ರಮುಖ್ ಭಗಿನಿ ಮೀನಾಕ್ಷಿ ಬೌದ್ಧಿಕ್ ನೀಡಿದರು.
1407 ಸೇವಿಕೆಯರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

ಉಜಿರೆ: ಬೆಳ್ತಂಗಡಿ ತಾಲೂಕು ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ಮಕರ ಸಂಕ್ರಮಣದ ಪ್ರಯುಕ್ತ ಘೋಷ ಸಹಿತ ಗಣವೇಶಧಾರಿ ಸೇವಿಕೆಯರಿಂದ ಪಥಸಂಚಲನ ಜ.13 ರಂದು ಉಜಿರೆ ನಗರದಲ್ಲಿ ಜರುಗಿತು.
ಉಜಿರೆ ಶ್ರೀ ರಾಮಭಜನಾ ಮಂದಿರ ಮತ್ತು ಉಜಿರೆ ಸಿದ್ಧವನದಿಂದ ಏಕಕಾಲದಲ್ಲಿ ಸಂಚಲನ ಹೊರಟು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸಂಪನ್ನಗೊಂಡಿತು. 1407 ಸೇವಿಕೆಯರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.
ನಂತರ ನಡೆದ ಸಂಘ ಸ್ಥಾನದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಸಂಪರ್ಕ ಪ್ರಮುಖ್ ಭಗಿನಿ ಮೀನಾಕ್ಷಿ ಬೌದ್ಧಿಕ್ ನೀಡಿದರು. ಅಧ್ಯಕ್ಷತೆಯನ್ನು ದರ್ಪಿಂಜ ಲಾಲದ ಶ್ರೀಮತಿ ರಾಜಶ್ರೀ ಡಿ ಧನಂಜಯ ರಾವ್ ವಹಿಸಿದ್ದರು. ಬೆಳ್ತಂಗಡಿ ತಾಲೂಕು ಕಾರ್ಯವಾಹಿಕೆ ಶ್ರೀಮತಿ ವೇದಾವತಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.