ಗೇರುಕಟ್ಟೆಯಲ್ಲಿ ಶನೈಶ್ಚರ ಪೂಜೆ

ಗೇರುಕಟ್ಟೆ : ಇಲ್ಲಿಯ ಪುಂಡಿಕಲ್ಲು ಕುಕ್ಕು ಎಂಬಲ್ಲಿ ದಿ| ರಾಮಕೃಷ್ಣ ಭಟ್ ಕುಂಟಿನಿ ಇವರು ನೆಟ್ಟು ಬೆಳೆಸಿ ಉಪನಯನ, ವಿವಾಹಾದಿ ಸಂಸ್ಕಾರಗಳನ್ನು ನಡೆಸಿ, ಪ್ರತಿ ವರ್ಷವೂ ನಡೆಸುತ್ತಿರುವ ೧೦ನೇ ವರ್ಷದ ಸಾಮೂಹಿಕ ಶನೈಶ್ಚರ ಪೂಜೆ, ಧಾರ್ಮಿಕ ಉಪನ್ಯಾಸ, ಹಾಗೂ ಬೆಳಗಿನವರೆಗಿನ ಯಕ್ಷಗಾನ ಬಯಲಾಟವು ಜ.5ರಂದು ನಡೆಯಿತು.
ಶ್ರೀ ರಾಮಕುಂಜೇಶ್ವರ ಪ. ಪೂ. ಕಾಲೇಜಿನ ಉಪನ್ಯಾಸಕ ಗಣರಾಜ ಕುಂಬ್ಳೆ ಧಾರ್ಮಿಕ ಉಪನ್ಯಾಸ ನೀಡಿ, ಶನಿಪೂಜೆಯ ಮಹತ್ವ ,ಡಂಭಾಚಾರದ ಪೂಜೆಯ ನಿರ್ಮೂಲನ, ಅಂತರಂಗಪೂರ್ಣ ಭಕ್ತಿಯ ಪ್ರಾಧಾನ್ಯತೆ ಇವೆಲ್ಲವನ್ನೂ ಉದಾಹರಣೆ ಸಹಿತ ವಿವರಿಸಿ ಹೇಳಿದರು.
ಬಳಿಕ ಸ್ಥಳೀಯ ಕಲಾವಿದರಿಂದ ನೃತ್ಯ ಕಾರ್ಯಕ್ರಮ, ಯಕ್ಷಗಾನಾಸಕ್ತ ವಿದ್ಯಾರ್ಥಿಗಳಿಂದ ಯಜ್ಞಸಂರಕ್ಷಣೆ ಎಂಬ ಯಕ್ಷಗಾನ ಬಯಲಾಟ ಮತ್ತು ಮಧೂರು ರಾಮಪ್ರಕಾಶ್ ಕಲ್ಲೂರಾಯರು ಸಂಯೋಜಿಸಿದ ಸಂಪೂರ್ಣ ಶ್ರೀ ದೇವಿ ಮಹಾತ್ಮೆಯು ಪ್ರಾತಃ ಕಾಲದವರೆಗೆ ನಡೆಯಿತು.
ಕುಂಟಿನಿ ರಾಘವೇಂದ್ರ ಭಾಂಗಿಣ್ಣಾಯ, ಜನಾರ್ದನ ಪೂಜಾರಿ ಉಪಸ್ಥಿತರಿದ್ದರು. ಸಂಜನ ಮತ್ತು ಸೌಜನ್ಯ ಪ್ರಾರ್ಥಿಸಿದರು. ಉಪನ್ಯಾಸಕಿ ಸುವರ್ಣ ಕುಮಾರಿ ಕೆ.ಆರ್ ನಿರೂಪಿಸಿದರು. ಪ್ರೊ| ಮಧೂರು ಮೋಹನ ಕಲ್ಲೂರಾಯರು ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಸಹ ಶಿಕ್ಷಕಿ ಪದ್ಮಶ್ರೀ ಭಾಸ್ಕರ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.