ಕೋಟಿ-ಚೆನ್ನಯ ಕ್ರೀಡಾ ಕೂಟ: ವೇಣೂರು ಯುವವಾಹಿನಿ ಘಟಕಕ್ಕೆ  ಸಮಗ್ರ ಚಾಂಪಿಯನ್ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಶ್ರೀ ಗುರು ನಾರಾಯಣ ಸ್ವಾಮೀ ಸೇವಾ ಸಂಘದ ಆಶ್ರಯದಲ್ಲಿ ನಡೆದ 9 ನೇ ವರ್ಷದ ಕೋಟಿ-ಚೆನ್ನಯ ಕ್ರೀಡಾ ಕೂಟದಲ್ಲಿ ಮಹಿಳೆಯರ ವಿಭಾಗದಲ್ಲಿ ಕಬ್ಬಡಿ,ಹಗ್ಗ ಜಗ್ಗಾಟದಲ್ಲಿ ಪ್ರಥಮ,ತ್ರೋಬಾಲ್ ನಲ್ಲಿ ದ್ವೀತಿಯ ಸ್ಥಾನ ಪಡೆಯುವ ಮೂಲಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪುರುಷರ ವಿಭಾಗದಲ್ಲಿ ಕಬ್ಬಡಿ ಮತ್ತು ಹಗ್ಗಜಗ್ಗಾಟದಲ್ಲಿ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆಯುವ ಮೂಲಕ ಪುರುಷರ ವಿಭಾಗದ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಲ್ಲದೇ ನಗದು ಬಹುಮಾನ ರೂ.13 ಸಾವಿರ ವನ್ನು ಪಡೆದಿರುತ್ತದೆ.
ಪ್ರಶಸ್ತಿಯನ್ನು ಸಂಘದ ಗೌರವಾಧ್ಯಕ್ಷ  ಕೆ.ವಸಂತ ಬಂಗೇರ ವಿತರಿಸಿದರು. ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಉಪಾಧ್ಯಕ್ಷೆ ಸುಜೀತಾ ವಿ  ಬಂಗೇರ ,ಕ್ರೀಡಾ ಸಮಿತಿ ಅಧ್ಯಕ್ಷ ಜಯವಿಕ್ರಮ್, ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ರಾಜಶ್ರೀ ರಮಣ್,ಯು.ಬಿ.ವೇದಿಕೆ ಅಧ್ಯಕ್ಷ ಸಂತೋಷ್ ಉಪ್ಪಾರು,ವೇಣೂರು, ಸಂ.ಕಾರ್ಯದರ್ಶಿ ಸಚೀನ್ ಕುಮಾರ್ ನುಜೋಡಿ, ಯುವವಾಹಿನಿ ಘಟಕದ ಅಧ್ಯಕ್ಷ ನಿತೀಶ್,ಉಪಾಧ್ಯಕ್ಷರಾದ ಅರುಣ್ ಕೋಟ್ಯಾನ್, ನವೀನ್ ಪಚ್ಚೇರಿ, ಪ್ರ.ಕಾರ್ಯದರ್ಶಿ ಸತೀಶ್ ಪಿ.ಎನ್. ಕೇಂದ್ರ ಸಮಿತಿ ಸದಸ್ಯ ಯೋಗೀಶ್ ಪೂಜಾರಿ‌ ,ನಾಗೇಶ್ ಕೋಟ್ಯಾನ್ ಹೊಸಂಗಡಿ, ರಕ್ಷೀತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.