HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮಾಯಾಮಹಾದೇವ ದೇವಸ್ಥಾನದ ನೂತನ ಗೋಪುರ ನಿರ್ಮಾಣಕ್ಕೆ ಶಿಲಾನ್ಯಾಸ

ಬೆಳಾಲು: ಶ್ರೀ ಮಾಯಾ ಮಹಾದೇವ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಎದುರಿನ ಗೋಪುರದ ಶಿಲಾನ್ಯಾಸ ಜ.11 ರಂದು ದೇವಸ್ಥಾನದ ಅರ್ಚಕ ಕೇಶವ ರಾಮಯಾಜಿ ಯವರ ವೈದಿಕ ವಿಧಿವಿಧಾನಗಳೊಂದಿಗೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್.ಪದ್ಮಗೌಡ ನೆರವೇರಿಸಿದರು.
ಮಾಯಾ ಗುತ್ತು ಪುಷ್ಪದಂತ ಜೈನ್, ಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಗೋಪುರ ನಿರ್ಮಾಣ ಸಮಿತಿಯ ಉಪಾಧ್ಯಕ್ಷ ಸಂಜೀವ ಗೌಡ ಕನಿಕ್ಕಿಲ, ಭಜನಾ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಎ.ಗಂಗಾಧರ ಸಾಲಿಯಾನ್, ಕಾರ್ಯದರ್ಶಿ ಶೇಖರ ಗೌಡ ಕೊಲ್ಲಿಮಾರು, ಶ್ರೀಮತಿ ಕನ್ನಿಕಾ ಪದ್ಮಗೌಡ, ರಮೇಶ್ ಪೂಜಾರಿ ಗುಂಡ್ಯ, ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು, ಸಿಬ್ಬಂದಿವರ್ಗ ಹಾಗೂ ಗೋಪುರ ನಿರ್ಮಾಣ ಗುತ್ತಿಗೆದಾರರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.