ನಾರಾವಿ: ಸಾಧಕರಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1

ನಾರಾವಿ ಲಯನ್ಸ್‌ಕ್ಲಬ್, ಶಿವಶಕ್ತಿ ಪ್ರೆಂಡ್ಸ್‌ಕ್ಲಬ್, ಗ್ರಾಮ ಪಂಚಾಯತ್ ನಾರಾವಿ, ಸೂರ್ಯಸಂಜೀವಿನಿ ಮಹಿಳಾ ಒಕ್ಕೂಟ ನಾರಾವಿ ಮತ್ತು ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಇವರ ಸಹಬಾಗಿತ್ವದಲ್ಲಿ ನಾರಾವಿ ಗ್ರಾಮ ಪಂಚಾಯಿತು ಸಬಾಂಗಣದಲ್ಲಿ  ನಾರಾವಿ ಲಯನ್ಸ್ ಕ್ಲಬ್‌ನ ವತಿಯಿಂದ ಸಿಯೋನಾ ಆಶ್ರಮ ಗಂಡಿಬಾಗಿಲು ನೆರಿಯ ಇದರ ಟ್ರಸ್ಟ್‌ನ ಅಧ್ಯಕ್ಷ  ಯು.ಸಿ.ಪೌಲೋಸ್‌ರವರನ್ನು ಶಾಲು ಹೊದಿಸಿ, ಹೂ-ಹಾರ ಹಾಕಿ, ಹಣ್ಣು ಹಂಪಲು ನೀಡಿ ಸನ್ಮಾನಿಸಲಾಯಿತು.

ಕ್ಲಬ್ಬಿನ ಸಂಯೋಜಕ  ಲ.ಕೆ ರಾಮಚಂದ್ರ ಭಟ್ ಕುಕ್ಕುಜೆ, ಕೆ.ಎಂ.ಸಿ ಆಸ್ಪತ್ರೆ ಪಿಆರ್ ಒ  ಹರ್ಬಟ್ ಮರಿಯಾ ಪಿರೇರಾ, ನಾರಾವಿ ಗ್ರಾ.ಪಂ  ಅಧ್ಯಕ್ಷ  ಹಾಗೂ ನಾರಾವಿ ಲಯನ್ಸ್‌ಕ್ಲಬ್ ಉಪಾದ್ಯಕ್ಷರಾದ   ಲ.ರವೀಂದ್ರ ಪೂಜಾರಿ, ಲಯನ್ ಅಧ್ಯಕ್ಷ  ವಿಜಯ ಕುಮಾರ್, ಗ್ರಾಮ ಪಂಚಾಯತ್ ಅಭಿವೃಧ್ಧಿ ಅಧಿಕಾರಿ ರವಿ ಎಸ್.ಎಲ್, ಕಾರ್‍ಯದರ್ಶಿ ನಿರ್ಮಲ್ ಕುಮಾರ್, ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ  ಸುರೇಶ್, ಸೂರ್‍ಯಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ನಂದಿನಿ, ಗ್ರಾ.ಪಂ. ಸದಸ್ಯರಾದ ಲ.ಪ್ರಮೀಳಾ ಆರ್.ಭಟ್, ಕುಮಾರಿ ಗಿರಿಜ ಉಪಸ್ಥಿತರಿದ್ದರು. ಕಾರ್‍ಯಕ್ರಮ ಸಂಯೋಜಕ  ಲ. ಕೆ ರಾಮಚಂದ್ರಭಟ್ ಕುಕ್ಕುಜೆರವರು ಎಲ್ಲರನ್ನು ಸ್ವಾಗತಿಸಿದರು. ಶಿವಶಕ್ತಿಪ್ರೆಂಡ್ಸ್‌ಕ್ಲಬ್‌ನ  ಅಧ್ಯಕ್ಷ  ಸುರೇಶ್ ಎಲ್ಲರಿಗೂ ದನ್ಯವಾದವಿತ್ತರು. ಶ್ರೀಮತಿ ರಾಜಶ್ರೀ ಕುತ್ಲೂರುರವರು ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.