ನಿಟ್ಟಡೆ ಕುಂಭಶ್ರೀ ಶಾಲೆ: ಸಂಸ್ಥಾಪಕರ ದಿನಾಚಣೆ

ವೇಣೂರು: ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಂಸ್ಥಾಪಕರ ದಿನಾಚಣೆಯು ಶಾಲೆಯ ಸಭಾಂಗಣದಲ್ಲಿ ಜರಗಿತು. ಶಾಲಾ ಸಂಚಾಲಕ ಗಿರೀಶ್ ಕೆ.ಎಚ್. ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮೌಲ್ಯಧಾರಿತ ಶಿಕ್ಷಣದ ಜತೆಗೆ ಮಕ್ಕಳಲ್ಲಿ ಶಿಸ್ತನ್ನು ಮೂಡಿಸುತ್ತಿದ್ದೇವೆ. ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸಲಾಗಿದೆ ಎಂದರು. ಹಿರಿಯ ಪ್ರಾ. ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್.ಎನ್. ರಾವ್, ಉಜಿರೆ ಶ್ರೀ ಧ.ಮಂ. ಕಾಲೇಜಿನ ಉಪನ್ಯಾಸಕ ಅಶ್ವಿತ್ ಕುಲಾಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಶಿಕ್ಷಕಿ ಅಪರ್ಣಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಕುಂಭಶ್ರೀ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಅಕ್ಷತಾ ವರದಿ ಮಂಡಿಸಿದರು. ಪ್ರೌಢ ಶಾಲೆ ವಿಭಾಗದ ಮುಖ್ಯ ಶಿಕ್ಷಕಿ ಉಷಾ ಜಿ. ಸ್ವಾಗತಿಸಿ, ಕುಂಭಶ್ರೀ ಪ.ಪೂ. ವಿಭಾಗದ ಪ್ರಾಚಾರ್ಯ ರಕ್ಷಿತ್ ಕುಲಾಲ್ ವಂದಿಸಿದರು. ಶಿಕ್ಷಕಿಯರಾದ ಶ್ವೇತಾ ಆಶೋಕ್ ಮತ್ತು ವಿಂದ್ಯಾ ಯು. ನಿರೂಪಿಸಿದರು. ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.