
ಅಳದಂಗಡಿ: ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಅಳದಂಗಡಿ ಬಳಿ ಜ.10ರಂದು ನಡೆದಿದೆ. ಕಾರ್ಕಳ ತಾಲೂಕಿನ ಈದು ಗ್ರಾಮದ ಪೆರ್ನೊಡಿ ನಿವಾಸಿ ರಾಧಾಕೃಷ್ಣ ಭಟ್ ರವರ ಪುತ್ರ ಅಭಿಷೇಕ್ ಮೃತಪಟ್ಟ್ಟ ದುರ್ದೈವಿ.
ಎಲೆಕ್ಟ್ರೀಶಿಯನ್ ವೃತ್ತಿ ನಿರ್ವಹಿಸುತ್ತಿದ್ದ ಅಭಿಷೇಕ್ ರವರು ಜ.10ರಂದು ಗುರುವಾಯನಕೆರೆಯಿಂದ ಅಳದಂಗಡಿ ಕಡೆಗೆ ಬೈಕ್ನಲ್ಲಿ ಸಂಚರಿಸುತ್ತಿರುವ ಸಂದರ್ಭ ಅಳದಂಗಡಿ ಸರಕಾರಿ ಶಾಲೆಯ ಬಳಿ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಅಭಿಷೇಕ್ರವರ ತಲೆಯ ಭಾಗಕ್ಕೆ ಗಂಭೀರ ಏಟು ತಗುಲಿದ್ದು, ಸ್ಥಳೀಯರು ತಕ್ಷಣ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ, ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.