ಮುಂಡೂರುಪಳಿಕೆ ಬೆಂಕಿ ಅವಘಡ

Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ : ಇಲ್ಲಿಯ ಮುಂಡೂರುಪಳಿಕೆಯ ತೆಂಕಬೈಲು ಮನೆ ರೋಯಿ ಜೋಸೆಫ್ ಇವರಿಗೆ ಸೇರಿದ ಸ್ಥಳಕ್ಕೆ ವಿದ್ಯುತ್ ಲೈನ್ ಶಾರ್ಟ್ ಸಕ್ಯೂರ್ಟ್ ಆಗಿ ಬೆಂಕಿ ಅವಘಡ ಸಂಭವಿಸಿದ ಘಟನೆ ಜ.೯ರಂದು ಮಧ್ಯಾಹ್ನದ ವೇಳೆ ನಡೆದಿದೆ. ಬೆಂಕಿ ಅವಘಡದಿಂದಾಗಿ ಹದಿನೈದು ಅಡಕೆ ಮರ, ಏಳು ತೆಂಗಿನ ಮರಗಳು, ನೀರಾವರಿಗಾಗಿ ಹಾಕಲಾಗಿದ್ದ ನಲ್ವತ್ತೆಂಟು ಪೈಪ್‌ಗಳು, ರಬ್ಬರ್ ಮರಗಳು ಬೆಂಕಿಗಾಹುತಿಯಾಗಿದ್ದು ಸಾವಿರಾರು ರೂಪಾಯಿ ನಷ್ಟವಾಗಿದೆ. ಈ ಸ್ಥಳದಲ್ಲಿ ಹಾದು ಹೋದ ವಿದ್ಯುತ್ ಲೈನ್ ನಲ್ಲಿ ಶಾರ್ಟ್ ಸಕ್ಯೂರ್ಟ್ ಆಗಿ ಬೆಂಕಿ ಅನಾಹುತ ಸಂಭವಿಸಿದ್ದು ಮಾಹಿತಿ ತಿಳಿದು ಅಗ್ನಿಶಾಮಕದಳ ಮತ್ತು ಊರವರು ಸೇರಿ ಹಬ್ಬಿದ ಬೆಂಕಿಯನ್ನು ಆರಿಸಿರುತ್ತಾರೆ. ಧರ್ಮಸ್ಥಳ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.