ಶಬರಿಮಲೆ ಉಳಿಸಿ-ಧರ್ಮ ರಕ್ಷಿಸಿ ಪ್ರತಿಭಟನೆ: ರಾಷ್ಟ್ರೀಯ ಹಿಂಜಾವೇ ಯಿಂದ ಸಿಎಂ-ಪಿಎಂ ಗೆ ಮನವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಹೋಗುವ ಭಕ್ತಾಧಿಗಳಿಗೆ ಸೂಕ್ತ ರಕ್ಷಣೆ ಒದಗಿಸುವ ಬಗ್ಗೆ ಕೇರಳ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಬೇಕು ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಆಚರಣಾ ಪದ್ಧತಿಯನ್ನು ಉಳಿಸಿ ಹಿಂದೂಗಳಿಗೆ ಆಗಿರುವ ಧಾರ್ಮಿಕ ಭಾವನೆಯ ಧಕ್ಕೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾನೂನಿನ ಸೂಕ್ತ ತಿದ್ದುಪಡಿ ಆಗಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಇಲ್ಲಿನ ಮಿನಿ ವಿಧಾನ ಸೌಧದ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿಗಳು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ನೀಡುವ ಕಾರ್ಯ ಜ.9 ರಂದು ನಡೆಯಿತು.
ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ ಶೆಟ್ಟಿ ತಿಮರೋಡಿ ಬೀಡು, ಗೌರವಾಧ್ಯಕ್ಷ ರವಿಕುಮಾರ್ ಬರಮೇಲು, ರಮೇಶ ಗುರುಸ್ವಾಮಿ, ಅನಿಲ್, ಮನೋಜ್ ಮೊದಲಾದವರು ಭಾಗಿಯಾಗಿದ್ದರು. ಪ್ರತಿಭಟನಾರ್ಥ ಬ್ಯಾನರ್ ಪ್ರದರ್ಶನ ನಡೆಸಿದ ಸಂಘಟನೆ ಕಾರ್ಯಕರ್ತರು ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಗೆಡಹಿದರು.

ಶಬರಿಮಲೆಗೆ ಮಹಿಳಾ ಪ್ರವೇಶ: 100 ಕೋಟಿ ಹಿಂದೂಗಳಿಗೆ ಮಾಡಿದ ಅವಮಾನ
ಶಬರಿಮಲೆಗೆ ಮಹಿಳೆಯರು ಹೋಗಬಾರದು ಎಂದಿಲ್ಲ. ಆದರೆ ಪ್ರಾಕೃತಿಕವಾಗಿ ಮಾಸಿಕ ಕ್ರಿಯೆಗಳ ಸಂದರ್ಭ ಅವರು ಹೋಗಬಾರದೆಂಬುದು ಕ್ಷೇತ್ರದ ಸಂಪ್ರದಾಯ. ಅದನ್ನು ಮೀರಿ ಸರಕಾರ- ನ್ಯಾಯಾಲಯಗಳು ನಡೆದುಕೊಳ್ಳುವುದು ದುರಂತ. ಇಲ್ಲಿ ರಾಮ-ಲಕ್ಷ್ಮಣರ ಹೆಸರಿನಲ್ಲಿ ರಾಜಕೀಯ, ರಾಮ ಮಂದಿರ, ದತ್ತಪೀಠದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ. ಚುನಾವಣೆ ಬಂತೆಂದರೆ ಧರ್ಮದ ಹೆಸರಿನಲ್ಲಿ ಕೇಸರಿ ಹಾಕಿದ ಯುವಕರನ್ನು ರಸ್ತೆಗೆ ಬಿಡಲಾಗುತ್ತಿದೆ. ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಧರ್ಮಬೋಧನೆ ನೀಡುವ ಯೋಚನೆಯಲ್ಲಿ ಪ್ರಾರಂಭವಾಗಿದೆ. ಧರ್ಮ ನಿರಂತರ ರಾಜಕೀಯ ಕ್ಷಣಿಕ. ನಮ್ಮ ಸಂಘಟನೆ ಸ್ವಂತ ಬಲದಲ್ಲಿ ಧರ್ಮರಕ್ಷಣೆ ಮಾಡುವ ಕೆಲಸ ಮಾಡಲಿದೆ. ನಾವು ಕಾರಣ ಇಲ್ಲದೆ ಧರ್ಮ ಅವಹೇಳಿಸುವುದನ್ನು ಸಹಿಸುವುದಿಲ್ಲ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.