ಬಂದ್‌ಗಳಾಗುತ್ತಿದ್ದರೆ ಭಾರತದ ಅಭಿವೃದ್ಧಿ ಸಾಧ್ಯವೇ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬಂದ್ ಮಾಡುವುದೇ ಪ್ರತಿಭಟನೆಯ ಪ್ರಥಮ ಮತ್ತು ಅಂತಿಮ ಅಸ್ತ್ರಗಳಾಗುತ್ತಿ ರುವುದು, ಬಂದ್ ಮಾಡದೇ ಇದ್ದರೆ ಸಮಸ್ಯೆಗಳಿಗೆ ಸರಕಾರಗಳು ಸ್ಪಂದಿಸದೇ ಇರುವುದು ಅತ್ಯಂತ ದುಃಖದ ಸಂಗತಿ. ಬಂದ್‌ಗೆ ಕರೆ ಕೊಟ್ಟಾಗ ಅದನ್ನು ಕೊಟ್ಟ ಪಕ್ಷ ಅಥವಾ ಅದಕ್ಕೆ ಬೆಂಬಲ ಕೊಡುವ ಪಕ್ಷ ಯಾವುದು ಎಂದು ನೋಡಬೇಕಿಲ್ಲ. ಯಾವ ಪಕ್ಷ ಆಡಳಿತದಲ್ಲಿದೆ? ಯಾವ ಪಕ್ಷ ವಿರೋಧ ಪಕ್ಷದಲ್ಲಿದೆ ಎಂದು ನೋಡಿದರೆ ಸಾಕು. ಇಂದು ಆಡಳಿತದಲ್ಲಿರುವ ಪಕ್ಷ ನಾಳೆ ವಿರೋಧ ಪಕ್ಷವಾದರೆ ಇಂತಹದೇ ಸಮಸ್ಯೆಗಳಿಗೆ ಮತ್ತು ಬೇಡಿಕೆಗಳಿಗೆ ಬಂದ್‌ಗೆ ಕರೆ ಕೊಡುತ್ತದೆ. ಅಂದು ವಿರೋಧ ಪಕ್ಷದಲ್ಲಿದ್ದು ಪ್ರತಿಭಟನೆ, ಬಂದ್‌ಗೆ ಬೆಂಬಲ ನೀಡಿದ್ದ ಪಕ್ಷ ಇಂದು ಆಡಳಿತಕ್ಕೆ ಬಂದರೆ ಅದೇ ಬಂದ್, ಪ್ರತಿಭಟನೆಯನ್ನು ವಿರೋಧಿಸುತ್ತದೆ. ಜನರು ಪಕ್ಷಗಳ ಹಂಗಿಗೆ ಬೀಳದೆ ನ್ಯಾಯದ ಕಡೆಗೆ ನಿಲ್ಲುವವರೆಗೆ ತಮ್ಮ ಪಕ್ಷವೂ ತಪ್ಪು ಮಾಡಿದಾಗ ಅದನ್ನು ತಪ್ಪು ಎಂದು ಹೇಳುವವರೆಗೆ ಈ ನಾಟಕಗಳು ನಡೆಯುತ್ತಲೇ ಇರುತ್ತವೆ.
ಬಂದ್‌ಗಳಿಂದ ಜನರಿಗೆ ಆಗುವ ತೊಂದರೆಗಳ ಬಗ್ಗೆ ಬಂದ್‌ಗೆ ಕರೆ ಕೊಡುವವರು, ಅದಕ್ಕೆ ಕಾರಣಕರ್ತರಾಗುವವರು
ಯೋಚಿಸುವುದೇ ಇಲ್ಲ. ಬಂದ್ ಕರೆಗಳಿಗೆ ಸರಕಾರವೇ ಬೆಂಬಲ ಕೊಡುವುದೆಂದರೆ ಅದು ನಾಶದ ಸಂಕೇತ. ಮಹಾತ್ಮಗಾಂಧೀಜಿಯವರು – ಯಾವುದೇ ಯೋಜನೆಯನ್ನು ಅಥವಾ ಕೆಲಸವನ್ನು ಯಾವುದೇ ನಾಯಕ ಎತ್ತಿಕೊಳ್ಳುವ ಮೊದಲು ಅದರಿಂದ ಸಾಮಾನ್ಯ ಮತ್ತು ದುರ್ಬಲ ಜನರಿಗೆ ತೊಂದರೆಯಾಗಬಹುದೇ ಎಂಬುವುದನ್ನು ಗಮನಿಸಿ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯಗಳನ್ನು ಕೈಗೆತ್ತಿಗೊಳ್ಳಬೇಕೆಂದು ಹೇಳಿದ್ದಾರೆ. ಆದರೆ ಇಂದು ನಮ್ಮ ರಾಜಕೀಯ ಪಕ್ಷಗಳು, ಸಂಘಟನೆಗಳು ಜನರಿಗೆ ಆಗುವ ತೊಂದರೆಗಳನ್ನು ಗಮನಿಸದೆ ತಮ್ಮ ಲಾಭಕ್ಕಾಗಿ ಜನರನ್ನು ಬಲಿ ತೆಗೆದುಕೊಳ್ಳಲೂ ಸಿದ್ಧರಾಗುತ್ತಾರೆ ಎಂಬುವುದೇ ನಮ್ಮ ದುರಂತ. ಜನರು ರಾಜಕೀಯ ಪಕ್ಷಗಳ ಗುಲಾಮರಾಗದೆ ಅವರ ತಪ್ಪುಗಳನ್ನೆಲ್ಲ ಸರಿ ಎಂದು ಹೇಳದೆ, ಅವರನ್ನು ಪ್ರಶ್ನಿಸುವಂತಾದರೆ ಮಾತ್ರ ಈ ರೀತಿಯ ಬಂದ್‌ಗಳು ಮತ್ತು ಅದಕ್ಕೆ ಇರುವ ಕಾರಣಗಳು ಬಂದ್ ಆಗಬಹುದು. ಇಲ್ಲದಿದ್ದರೆ ನಿಧಾನವಾಗಿ ಜನಜೀವನವೇ ಬಂದ್ ಆಗಬಹುದು. ಭಾರತದ ಅಭಿವೃದ್ಧಿ ಕನಸಿನ ಗಂಟಾಗಬಹುದು. ಬೆಳ್ತಂಗಡಿ ಜನತೆಗೆ ಬಲಾತ್ಕಾರದ ಬಂದ್‌ನ ತೊಂದರೆಗಳ ಅನುಭವ ಇರುವುದರಿಂದ ಇಲ್ಲಿ ಯಾವುದೇ ಬಲಾತ್ಕಾರದ ಬಂದ್ ನಡೆಯಲಾರದು. ಜನ ವಿರೋಧಿ ಮತ್ತು ಕಾನೂನು ವಿರೋಧಿಯಾಗಿರುವುದರಿಂದ ಅಂತಹ ಯಾವುದೇ ಬಂದ್‌ಗಳಿಗೆ ಜನರು ಬೆಂಬಲ ಸೂಚಿಸುವುದಿಲ್ಲ ಎಂಬ ನಂಬಿಕೆ ಇಲ್ಲಿ ಎಲ್ಲರಲ್ಲಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.