ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಲ್ಲಿ ನಿರ್ಮಿಸಲಾದ ಶಾಲಾ ಕಟ್ಟಡಗಳ ಕಾಮಗಾರಿ ಕಳಪೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿಗೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ (ಆರ್.ಎಮ್. ಎಸ್) ಯಲ್ಲಿ ಸುಮಾರು 15 ಶಾಲೆಗಳಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದ್ದು, ಎಲ್ಲಾ ಶಾಲೆಗಳ ಕಟ್ಟಡಗಳ ಕಾಮಗಾರಿಗಳು ಕಳಪೆಯಾಗಿದ್ದು, ಒಂದೆರಡು ವರ್ಷಗಳಲ್ಲೇ ಮತ್ತೆ ದುರಸ್ತಿಗೆ ಬಂದಿದೆ.
ಆರ್.ಎಮ್.ಎಸ್ ಯೋಜನೆ ಯಲ್ಲಿ ಬೆಳ್ತಂಗಡಿ ತಾಲೂಕಿಗೆ ಒಟ್ಟು 18 ಶಾಲೆಗಳಿಗೆ ನೂತನ ಕೊಠಡಿ ನಿರ್ಮಾಣಕ್ಕೆ ಸರಕಾರ ಅನುದಾನ ಮಂಜೂರು ಗೊಳಿಸಿತ್ತು. ತಲಾ ಸುಮಾರು ರೂ.೫೦ ಲಕ್ಷ ವೆಚ್ಚದಲ್ಲಿ ಈ ಶಾಲಾ ಕೊಠಡಿಗಳನ್ನು ನಿರ್ಮಿಸ ಲಾಗಿದ್ದು, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂಬುದು ಸರಕಾರದ ಆದೇಶವಾಗಿತ್ತು.
ಬೆಳ್ತಂಗಡಿ ತಾಲೂಕಿನಲ್ಲಿ ಸ.ಪ. ಪೂರ್ವ ಕಾಲೇಜು ಪುಂಜಾಲಕಟ್ಟೆ, ಸ.ಪ.ಪೂ.ಕಾಲೇಜು ಅಳದಂಗಡಿ, ಸ.ಪ್ರೌ.ಶಾಲೆ ಬಂಗಾಡಿ, ಸ. ಪ್ರೌ. ಶಾಲೆ ಕೊಯ್ಯೂರು, ಸ.ಪ್ರೌ.ಶಾಲೆ ಕಕ್ಕಿಂಜೆ, ಸ.ಪ.ಪೂ.ಕಾಲೇಜು ಗೇರುಕಟ್ಟೆ, ಸ.ಪ್ರೌ. ಕರಾಯ, ಸ.ಪ್ರೌ.ಶಾಲೆ ಹಳೆಪೇಟೆ ಉಜಿರೆ, ಸ.ಪ್ರೌ.ಶಾಲೆ ಗುರುವಾಯ ನಕೆರೆ, ಸ.ಪ್ರೌ.ಶಾಲೆ ಕಾಶಿಪಟ್ಣ, ಸ.ಪ್ರೌ.ಶಾಲೆ ಪೆರ್ಲ ಬೈಪಾಡಿ, ಸ.ಪ.ಪೂ.ಕಾಲೇಜು
ಅರಸಿನಮಕ್ಕಿ, ಸ.ಪ.ಪೂ. ಕಾಲೇಜು ಕೊಕ್ಕಡ, ಸ.ಪ್ರೌ.ಶಾಲೆ ಸರಳೀಕಟ್ಟೆ, ಸ.ಪ್ರೌ.ಶಾಲೆ ನಾರಾವಿ, ಸ.ಪ್ರೌ.ಶಾಲೆ ಬಳಂಜ, ಸ.ಪ್ರೌ.ಶಾಲೆ ಬದನಾಜೆ, ಸ.ಪ್ರೌ.ಶಾಲೆ ಶಾಲೆತ್ತಡ್ಕ ಶಾಲೆಗಳಿಗೆ ಈ ಯೋಜನೆಯಲ್ಲಿ ಕೊಠಡಿಗಳು ನಿರ್ಮಾಣವಾಗಿದೆ.
ರಾಜ್ಯ ಮಟ್ಟದಲ್ಲಿ ಈ ಕಟ್ಟಡಗಳ ಕಾಮಗಾರಿಯನ್ನು ಸರಕಾರದ ವತಿಯಿಂದ ಟೆಂಡರ್ ಕರೆದು ನೀಡಿದ್ದರಿಂದ ಬೆಂಗಳೂರಿನ ಗುತ್ತಿಗೆದಾರರು ಇದರ ಕಾಮಗಾರಿಯನ್ನು ನಿರ್ವಹಿಸಿದ್ದರು. ಈ ಯೋಜನೆಯ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಾಗಲಿ, ಸಂಬಂಧಪಟ್ಟ ಶಾಲೆಗಾಗಲಿ ಯಾವುದೇ ಮಾಹಿತಿ ಬಂದಿರಲಿಲ್ಲ. ಕಾಮಗಾರಿಯ ಗುತ್ತಿಗೆ ವಹಿಸಿಕೊಂಡವರು ಶಾಲೆಗೆ ಬಂದು ಕೆಲಸ ಆರಂಭಿಸಿದಾಗ ಮಾತ್ರ ಎಲ್ಲರಿಗೂ ಇದರ ಮಾಹಿತಿ ಲಭ್ಯವಾಗಿತ್ತು. ಈಗಾಗಲೇ ನಿರ್ಮಿಸಲಾದ ಶಾಲಾ ಕೊಠಡಿಗಳ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಅಲ್ಲಲ್ಲಿ ಗೋಡೆ, ನೆಲ ಬಿರುಕು ಬಿಟ್ಟಿದೆ. ಕೆಲವೊಂದು ಕಡೆ ಶಾಲಾ ಕಟ್ಟಡ ಸ್ಲಾಬ್‌ಕೂಡಾ ಬಿರುಕು ಬಿಟ್ಟಿದ್ದು, ವಿದ್ಯಾರ್ಥಿಗಳಿಗೆ ಅಪಾಯವನ್ನು ತಂದೊಡ್ಡಿದೆ. ಕಟ್ಟಡದ ಬಾಗಿಲು ಮತ್ತು ಕಿಟಕಿಗೆ ಹಾಕಿದ ಮರ ಕಳಪೆ ಗುಣಮಟ್ಟದ್ದಾಗಿದೆ. ಮಳೆಗಾಲದಲ್ಲಿ ಇದನ್ನು ಹಾಕುವುದೇ ಕಷ್ಟ. ಕಟ್ಟಡಗಳು ನಿರ್ಮಾಣವಾಗಿ ಒಂದೆರಡು ವರ್ಷದಲ್ಲೇ ಮತ್ತೆ ದುರಸ್ತಿಗೆ ಬಂದಿದೆ.
ಕರಾಯ ಸೇರಿದಂತೆ ಅನೇಕ ಕಡೆಗಳಲ್ಲಿ ಕಾಮಗಾರಿ ನಡೆಯುವ ಹಂತದಲ್ಲೇ ಶಾಲಾಭಿವೃದ್ಧಿ ಸಮಿತಿ ಸೇರಿದಂತೆ ಊರವರು ಕಟ್ಟಡದ ಕಾಮಗಾರಿ ಕಳಪೆಯಾಗಿರುವುದನ್ನು ತಿಳಿದು ಆಕ್ಷೇಪ ವ್ಯಕ್ತಪಡಿಸಿ, ಇದರ ಬಿಲ್ಲನ್ನು ಗುತ್ತಿಗೆದಾರರಿಗೆ ನೀಡದಂತೆ ಆಗ್ರಹಿಸಿದ್ದರೂ ಹೆಚ್ಚಿನ ಪ್ರಯೋಜನವಾಗಲಿಲ್ಲ. ರಾಜ್ಯಮಟ್ಟದಲ್ಲಿ ಇದರ ಟೆಂಡರ್ ಆಗಿರುವುದರಿಂದ ಮೂರನೇ ಸಂಸ್ಥೆಯಿಂದ ಇದರ ಗುಣಮಟ್ಟ ಪರೀಕ್ಷೆಯನ್ನು ನಡೆಸಿ ಕಾಮಗಾರಿಯ ಅನುದಾನವನ್ನು ಗುತ್ತಿಗೆದಾರರು ಪಡೆದುಕೊಂಡಿದ್ದ ರೆನ್ನಲಾಗುತ್ತಿದೆ. ಆದರೆ ಸ್ಥಳೀಯ ಅಧಿಕಾರಿಗಳಿಗೆ ಇದರ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ.
ಬೆಳ್ತಂಗಡಿ ತಾಲೂಕು ಪಂಚಾಯತದ ಸಾಮಾನ್ಯ ಸಭೆ ಮತ್ತು ಶಾಸಕರ ಅಧ್ಯಕ್ಷತೆಯ ತ್ರೈಮಾಸಿಕ ಕೆಡಿಪಿ ಸಭೆಗಳಲ್ಲಿ ಈ ಶಾಲಾ ಕಟ್ಟಡಗಳ ಕಳಪೆ ಕಾಮಗಾರಿಗಳ ಬಗ್ಗೆ ಸದಸ್ಯರು ಪ್ರಸ್ತಾಪಿಸಿ, ಇದರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ, ನಿರ್ಣಯವನ್ನು ಕೈಗೊಳ್ಳಲಾಗಿದೆ.

ಗುತ್ತಿಗೆದಾರರಿಂದಲೇ ದುರಸ್ತಿಗೆ ನಿರ್ಣಯ
ಡಿ.19 ರಂದು ನಡೆದ ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿಯವರ ಅಧ್ಯಕ್ಷತೆಯಲ್ಲಿ ನಡೆದ ಬೆಳ್ತಂಗಡಿ ತಾಲೂಕು ಪಂಚಾಯತದ ಸಾಮಾನ್ಯ ಸಭೆಯಲ್ಲಿ ಆರ್.ಎಮ್.ಎಸ್ ಯೋಜನೆಯ ಶಾಲಾ ಕಟ್ಟಡಗಳ ಕಳಪೆ ಕಾಮಗಾರಿಗಳ ಬಗ್ಗೆ ದೀರ್ಘ ಚರ್ಚೆ ನಡೆಯಿತು. ಕರಾಯ ಸೇರಿದಂತೆ ಇತರ ಶಾಲೆಗಳ ಕಾಮಗಾರಿ ಕಳಪೆಯಾಗಿದ್ದು, ಶಾಲಾ ಕಟ್ಟಡ ಒಂದೆರಡು ವರ್ಷಗಳಲ್ಲಿ ದುರಸ್ತಿಗೆ ಬಂದಿದೆ. ಇದರ ಬಗ್ಗೆ ತನಿಖೆ ನಡೆಸಬೇಕು, ಕಟ್ಟಡವನ್ನು ದುರಸ್ತಿಗೊಳಿಸಬೇಕು ಎಂದು ಸದಸ್ಯರು ಒತ್ತಾಯಿಸಿದ್ದರು. ಈ ಬಗ್ಗೆ ಚರ್ಚೆ ನಡೆದು ಸಂಬಂಧ ಪಟ್ಟ ಗುತ್ತಿಗೆದಾರರೇ ಇದನ್ನು ದುರಸ್ತಿಗೊಳಿಸಬೇಕು ಎಂದು ನಿರ್ಣಯಿಸಿ ಜಿ.ಪಂ.ಮೂಲಕ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.