ವಿಜಯಾಬ್ಯಾಂಕ್ ವಿಲೀನಕ್ಕೆ ಕಾಂಗ್ರೆಸ್‌ನಿಂದ ಪ್ರತಿಭಟನೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: 88 ವರ್ಷಗಳಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾದ, ಲಾಭದಲ್ಲಿ ಮುನ್ನಡೆಯುತ್ತಿರುವ ಕರಾವಳಿಯ ಜನಪ್ರಿಯವಾದ ವಿಜಯ್ ಬ್ಯಾಂಕ್ ಅನ್ನು, ಈಗ ನಷ್ಟದಲ್ಲಿರುವ ಗುಜರಾತಿನ ದೇನಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸುತ್ತಿರುವ ಕೇಂದ್ರ ಸರ್ಕಾರ ಹಾಗೂ ವಿಲೀನದ ಬಗ್ಗೆ ಮೌನ ಪ್ರದರ್ಶಿಸುತ್ತಿರುವ ಮಂಗಳೂರು ಸಂಸದರ ವಿರುದ್ಧ ಕಾಂಗ್ರೆಸ್ ವತಿಯಿಂದ ಜ.10 ರಂದು ಬೆಳ್ತಂಗಡಿ ವಿಜಯ ಬ್ಯಾಂಕ್‌ನ ಎದುರುಗಡೆ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ ಅಜ್ರಿ, ಕೆಪಿಸಿಸಿ ಸದಸ್ಯ ಪೀತಾಂಬರ ಹೇರಾಜೆ, ಜಿ.ಪಂ. ಸದಸ್ಯ ಶೇಖರ ಕುಕ್ಕೆಡಿ, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ತಾ.ಪಂ ಸದಸ್ಯ ಪ್ರವೀಣ್ ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ ಹಾಗೂ ಜಿ.ಪಂ ಮಾಜಿ ಸದಸ್ಯ ಶೈಲೇಶ್ ಕುಮಾರ್, ಕಿಸಾನ್ ಘಟಕದ ಅಧ್ಯಕ್ಷ ಪಳನಿ ಸ್ವಾಮಿ, ಮುಖಂಡರಾದ ಎ.ಸಿ ಮ್ಯಾಥ್ಯೂ, ಪದ್ಮನಾಭ ಸಾಲಿಯಾನ್, ಮೆಹಬೂಬ್, ನ.ಪಂ ಸದಸ್ಯರಾದ ಮುಸ್ತರ್ ಜಾನ್, ಮೆಹಬೂಬ್, ಜನಾರ್ದನ ಹಾಗೂ ಕಾಂಗ್ರೆಸ್‌ನ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.