ವಿ.ಪ. ಸದಸ್ಯ ಹರೀಶ್ ಕುಮಾರ್‌ಗೆ ಉಜಿರೆ ನಾಗರಿಕರ ಗೌರವಾರ್ಪಣೆ

ಉಜಿರೆ : ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿರುವುದಕ್ಕೆ ವಿಧಾನ ಪರಿಷತ್ ಸದಸ್ಯ ಹುದ್ದೆ ಒದಗಿ ಬಂದಿದೆ. ತಾಲೂಕಿನ ಜನರೊಂದಿಗೆ ತನ್ನ ಕೈಯಲ್ಲಾದ ಸೇವೆ ಮಾಡಲು ತಾನು ಸದಾ ಸಿದ್ಧ. ಎಲ್ಲರ ಪ್ರೀತಿ, ವಿಶ್ವಾಸಕ್ಕೆ ತಾನು ಋಣಿಯಾಗಿದ್ದೇನೆ. ಸಮಸ್ಯೆಗಳ ಪರಿಹಾರ ಹಾಗೂ ಅಭಿವೃದ್ಧಿ ಕಾರ್ಯದಲ್ಲಿ ತಾನು ನಿಮ್ಮೊಂದಿಗಿದ್ದು ಒಟ್ಟಾಗಿ ತೊಡಗಿಸಿಕೊಳ್ಳೋಣ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ನುಡಿದರು.
ಅವರು ಜ. 8 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಉಜಿರೆ ನಾಗರಿಕರ ಗೌರವಾರ್ಪಣೆ ಸ್ವೀಕರಿಸಿ ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ ಹರೀಶ್ ಕುಮಾರ್ ಒಬ್ಬ ಸಾತ್ವಿಕ ರಾಜಕಾರಣಿ. ಅವರು ಕೇವಲ ಪಕ್ಷಕ್ಕೆ ಸೀಮಿತರಾಗಿರದೆ ಎಲ್ಲರಿಗೂ ಬೇಕಾದವರು. ಅವರಿಗೆ ದೊರೆತ ವಿಧಾನ ಪರಿಷತ್ ಸದಸ್ಯತ್ವ ಹುದ್ದೆ ಇಡೀ ತಾಲೂಕಿಗೆ ಸಂದ ಗೌರವ. ರಾಜಕಾರಣಿಯ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿ ಶುಭಕೋರಿದರು. ಊರ ನಾಗರಿಕರ ಪರವಾಗಿ ಪಡ್ವೆಟ್ನಾಯ ಹರೀಶ ಕುಮಾರ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ಸಮರ್ಪಿಸಿ ಗೌರವಿಸಿದರು. ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಹರೀಶ್ ಕುಮಾರ್ ಎಲ್ಲರಿಗೂ
ಆತ್ಮೀಯರಾದ ಸ್ನೇಹಪರ ವ್ಯಕ್ತಿತ್ವದವರೆಂದರು.
ಇಚ್ಚಿಲ ಸುಂದರ ಗೌಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೋಹನ ಶೆಟ್ಟಿಗಾರ್, ಪಾಂಡುರಂಗ ಬಾಳಿಗ, ರಾಘವೇಂದ್ರ ಬೈಪಾಡಿತ್ತಾಯ, ಅರುಣ ಕುಮಾರ್, ಜಯಂತ ಶೆಟ್ಟಿ, ರಾಜೇಶ ಪೈ, ಪ್ರಶಾಂತ ಕುಮಾರ್, ವಿಶ್ವನಾಥ, ಸಂಜೀವ ಕೆ, ಅರವಿಂದ ಕಾರಂತ, ಶ್ರೀಧರ ಕೆ.ವಿ, ರಮೇಶ ಪ್ರಭು, ಬಾಲಕೃಷ್ಣ ಗೌಡ, ರಾಮಚಂದ್ರ ಶೆಟ್ಟಿ, ಅಶೋಕ ಭಟ್, ಬಾಲಕೃಷ್ಣ ಶೆಟ್ಟಿ, ಪ್ರೊ| ಕೃಷ್ಣಮೂರ್ತಿ, ಡಾ| ದಯಾಕರ್, ಪ್ರಭಾಕರ ಹೆಗ್ಡೆ, ಗೋಪಾಲಕೃಷ್ಣ ಜಿ.ಕೆ. ಮೊದಲಾದವರು ಉಪಸ್ಥಿತರಿದ್ದರು. ಶರತ್‌ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಹರೀಶ ಕುಮಾರ್ ಜನಾರ್ದನ ಸ್ವಾಮಿ ಮತ್ತು ಪರಿವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ವರದಿ : ಸಾಂತೂರು ಶ್ರೀನಿವಾಸ ತಂತ್ರಿ ಉಜಿರೆ ಚಿತ್ರ : ಶರ್ಮ, ಉಜಿರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.