ಅಳದಂಗಡಿ ಸಹಕಾರ ಸಂಘದ ಚುನಾವಣೆ ಸರ್ವ ಸದಸ್ಯರಿಗೂ ಮತದಾನದ ಹಕ್ಕು: ಹೈಕೋರ್ಟ್ ತೀರ್ಪು

ಬೆಳ್ತಂಗಡಿ: ಸರ್ವ ಸದಸ್ಯರ ಮಹಾಸಭೆಯಲ್ಲಿ ಪಾಲ್ಗೊಂಡಿಲ್ಲ ಹಾಗೂ ಕನಿಷ್ಟ ವ್ಯವಹಾರ ಎಂಬ ನೆಪವೊಡ್ಡಿ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಮತದಾನ ಮಾಡುವ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 2013ರ ಪರಿಷ್ಕೃತ ಸಹಕಾರ ಕಾಯಿದೆ 20ರ ಪ್ರಕಾರ ಸಹಕಾರ ಸಂಘ ನಡೆಸುವ ಐದು ಸರ್ವ ಸದಸ್ಯರ ಸಭೆಯಲ್ಲಿ ಮೂರರಲ್ಲಿ ಭಾಗವಹಿಸಿ ದ್ದವರಿಗೆ ಮಾತ್ರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಮತದಾನ ಮಾಡುವ ಹಕ್ಕಿದೆ ಆದರೆ ಈ ತಿದ್ದುಪಡಿಯನ್ನು ಪ್ರಶ್ನಿಸಿ ತಾಲೂಕಿನ ಸಹಕಾರ ಭಾರತಿ ನ್ಯಾಯಾಲಯದ ಮೆಟ್ಟಿಲೇರಿತು .
ಸಹಕಾರ ಭಾರತಿ ಪ್ರಯತ್ನದ ಫಲ : ಪ್ರಜಾಸತಾತ್ಮಕ ರೀತಿಯಲ್ಲಿ ಸಹಕಾರ ಸಂಘಗಳ ಚುನಾವಣೆ ನಡೆಯಬೇಕಿದ್ದು ಕನಿಷ್ಟ ೩ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಳ್ಳುವ ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ಎಂಬ ಷರತ್ತು ಹಾಕಿದೆ. ಎಲ್ಲರಿಗೂ ಮತದಾನದ ಹಕ್ಕು ನೀಡಬೇಕು ಎಂದು ನ್ಯಾಯಾಧೀಶರಾದ ಸುಜಾತಾ ಅವರು ಆದೇಶ ಮಾಡಿ ನ್ಯಾಯಾಲಯ ತೀರ್ಪು ನೀಡಿದ್ದಾರೆ. ಸಹಕಾರ ಭಾರತಿ ಅವಕಾಶ ವಂಚಿತ ಮತದಾರರ ಪರ ಪ್ರಯತ್ನ ನಡೆಸಿದ್ದು ನ್ಯಾಯಾಲಯದ ಈ ತೀರ್ಪು ಸಂತಸ ತಂದಿದೆ ಎಂದು ಸುಂದರ ಹೆಗ್ಡೆ ತಿಳಿಸಿದ್ದಾರೆ. ಇದರಿಂದಾಗಿ ಜ.10 ರಂದು ನಡೆಯಲಿರುವ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಕೇವಲ 639 ಸದಸ್ಯರಿಗೆ ಅವಕಾಶ ಇದ್ದು ಪ್ರಸ್ತುತ ಎಲ್ಲಾ 2700 ಸದಸ್ಯರಿಗೆ ಮತದಾನದ ಹಕ್ಕು ಬಂದಿದೆ. ತಾಲೂಕಿನ ಸಹಕಾರ ಭಾರತಿ ಅಧ್ಯಕ್ಷ ವೇಣೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ಶಂಕರಭಟ್ಟ ಕಟ್ಟೂರು ಇವರು ಈ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸಹಕಾರ ಭಾರತಿ ಪರವಾಗಿ ನ್ಯಾಯಾವಾದಿ ವಿಶ್ವಜೀತ್ ಶೆಟ್ಟಿ ವಾದಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.