ಬೆಳ್ತಂಗಡಿಯಲ್ಲಿ ನ್ಯೂ ಜೈನ್ ಮೊಬೈಲ್ ಹೊಸ ಶೋರೂಮ್ ಶುಭಾರಂಭ

ನೂತನ ಶೋರೂಮ್‌ನ ಉದ್ಘಾಟನೆಯನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್ ಪ್ರಭಾಕರ್ ನೆರವೇರಿಸಿದರು

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಪ್ರಪ್ರಥಮ ಮೊಬೈಲ್ ಮಳಿಗೆ ಜೈನ್ ಮೊಬೈಲ್ ಇದರ ಹೊಸ ಶೋರೂಮ್ ‘ನ್ಯೂ ಜೈನ್ ಮೊಬೈಲ್’ ಬೆಳ್ತಂಗಡಿಯ ಪಾರ್ವತಿ ನಾರಾಯಣ ಸಂಕೀರ್ಣದಲ್ಲಿ ಇಂದು (ಜ. 10) ಶುಭಾರಂಭಗೊಂಡಿತು. ನೂತನ ಶೋರೂಮ್‌ನ ಉದ್ಘಾಟನೆಯನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್ ಪ್ರಭಾಕರ್ ನೆರವೇರಿಸಿ, ಸಂಸ್ಥೆಗೆ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಗುರುವಾಯನಕೆರೆ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ  ಅನಂತ್‌ರಾಜ್ ಜೈನ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್, ನ್ಯಾಯವಾದಿ ಶಶಿಕಿರಣ್ ಜೈನ್‌ , ಮಾಲಕರ ಮಾತೃಶ್ರೀಯವರಾದ  ಸುನಂದ , ಜಯವರ್ಮ , ಪುಷ್ಪಾವತಿ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಸಂಸ್ಥೆಗೆ ಶುಭಹಾರೈಸಿದರು.
ಆಹ್ವಾನಿತ ಅತಿಥಿಗಳನ್ನು ಸಂಸ್ಥೆಯ ಮಾಲಕರಾದ ವೀರಚಂದ್ರ ಜೈನ್ ಮತ್ತು ಶ್ರೀಮತಿ ಮೇಘನಾ ದಂಪತಿ ಸ್ವಾಗತಿಸಿ, ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.