ಬೆಳ್ತಂಗಡಿಯಲ್ಲಿ ವೈಭವ ಆರ್ಕೇಡ್ ಶುಭಾರಂಭ

Advt_NewsUnder_1
Advt_NewsUnder_1
ನೂತನ ಸಂಕೀರ್ಣದ ಉದ್ಘಾಟನೆಯನ್ನು ಮಾಜಿ ಶಾಸಕ ಕೆ.ವಸಂತ ಬಂಗೇರ, ನೆರವೇರಿಸಿ ಶುಭಹಾರೈಸಿದರು.

ಬೆಳ್ತಂಗಡಿ : ಇಲ್ಲಿಯ ಚರ್ಚ್ ರಸ್ತೆ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಕಟ್ಟಡ ಹಾಗೂ ವಾಣಿಜ್ಯ ಸಂಕೀರ್ಣ ವೈಭವ ಆರ್ಕೇಡ್ ಜ.10 ರಂದು ಶುಭಾರಂಭಗೊಂಡಿತು. ನೂತನ ಸಂಕೀರ್ಣದ ಉದ್ಘಾಟನೆಯನ್ನು ಮಾಜಿ ಶಾಸಕ ಕೆ.ವಸಂತ ಬಂಗೇರ, ನೆರವೇರಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ಪೆರವಾರು ಪುರೋಹಿತ ಮತ್ತು ಜ್ಯೋತಿಷ್ಯ ಸುಬ್ರಹ್ಮಣ್ಯ ಪೆರಡಿತ್ತಾಯ, ಗುರುವಾಯನಕೆರೆ ಜುಮ್ಮಾ ಮಸ್ಜಿದ್ ಪ್ರಧಾನ ಧರ್ಮಗುರು ಶರೀಫ್ ಸಅದಿ, ಬೆಳ್ತಂಗಡಿ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಸ್ ಸುಧಾಕರ್, ಬೆಳ್ತಂಗಡಿ ಐ.ಜೆ ಇಂಟರ್‌ನ್ಯಾಷನಲ್ ಮಾಲಕ ಡಿ.ಎಂ ನವಾಝ್, ಪಡಂಗಡಿ ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ನ.ಪಂ ಸದಸ್ಯ ಜಯಾನಂದ ಗೌಡ, ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಆಹ್ವಾನಿತ ಅತಿಥಿಗಳನ್ನು ಮಾಲಕರ ಮಾತಾಪಿತರಾದ ಶ್ರೀಮತಿ ಲೀಲಾ ಮತ್ತು ಬಾಬು ಶೆಟ್ಟಿ , ಮಾಲಕರಾದ ಶ್ರೀಮತಿ ಸುಷ್ಮಾ ಮತ್ತು ಸೀತಾರಾಮ ಶೆಟ್ಟಿ ದಂಪತಿ ಹಾಗೂ ಕುಟುಂಬವರ್ಗದವರು ಸ್ವಾಗತಿಸಿ, ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.