ಬೆಂಕಿ ಅವಘಡ: ಮಹಿಳೆ ಮೃತ್ಯು

ಬೆಳ್ತಂಗಡಿ: ಇಲ್ಲಿಯ ಸಂಜಯ ನಗರ ನಿವಾಸಿ ನಿವೃತ್ತ ಶಿಕ್ಷಕ ಹಾಗೂ ನೃತ್ಯಗುರು ಕಮಲಾಕ್ಷ ಆಚಾರ್‌ರವರ ಧರ್ಮಪತ್ನಿ ಪುಷ್ಪಲತಾ ಆಚಾರ್(62.ವ)ರವರು ಜ.5ರಂದು ನಿಧನರಾದರು. ಜ.4 ರಂದು ಪುಷ್ಪಲತಾರವರು ಮನೆಯಲ್ಲಿ ದೇವರಿಗೆ ದೀಪ ಇಡುವ ಸಂದರ್ಭದಲ್ಲಿ ಬೆಂಕಿ ಅವಘಡಕ್ಕೆ ಸಿಲುಕಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೆ ಜ.5 ರಂದು ಕೊನೆಯುಸಿರೆಳೆದರು. ಮೃತರು ಪತಿ ಕಮಲಾಕ್ಷ ಆಚಾರ್, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯನ್ನು ಜ.7 ರಂದು ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.