ಕಳಿಯ ಸಹಕಾರಿ ಸಂಘ: ಸಹಕಾರಿ ಭಾರತಿ ಬೆಂಬಲಿತ 12 ಮಂದಿಗೆ ಜಯ

Advt_NewsUnder_1
Advt_NewsUnder_1

ಗೇರುಕಟ್ಟೆ; ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗೇರುಕಟ್ಟೆ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ-2019 ರ ಮುಂದಿನ 5 ವರ್ಷಗಳ ಅವಧಿಗೆ ಜ.5 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯ ಎಲ್ಲಾ 12 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ.
ಸಾಮಾನ್ಯ ಸ್ಥಾನ ಅಭ್ಯರ್ಥಿಗಳಾದ ವಸಂತ ಮಜಲು, ದೇವಣ್ಣ ಮೂಲ್ಯ, ರಾಜೀವ ಗೌಡ, ರಾಜ್‌ಪ್ರಕಾಶ್ ಶೆಟ್ಟಿ, ಹರಿದಾಸ ಪಡಂತಾಯ, ಹಿಂದುಳಿದ ವರ್ಗ ಪ್ರವರ್ಗ ಸ್ಥಾನದ ಅಭ್ಯರ್ಥಿಗಳಾದ ನಾಣ್ಯಪ್ಪ ಪೂಜಾರಿ, ರತ್ನಾಕರ, ಮಹಿಳಾ ಮೀಸಲು ಸ್ಥಾನದ ಅಭ್ಯರ್ಥಿಗಳಾದ ಚಂದ್ರಾವತಿ, ಮಮತಾ, ಪ.ಪಂಗಡ ಸ್ಥಾನದ ಅಭ್ಯರ್ಥಿ ಶೇಖರ ನಾಯ್ಕ, ಪ.ಜಾತಿ ಸ್ಥಾನದ ಅಭ್ಯರ್ಥಿ ನೋಣಯ್ಯ ಹಾಗೂ ಸಾಲಗಾರರಲ್ಲದ ಸ್ಥಾನದ ಅಭ್ಯರ್ಥಿಯಾದ ಶಶಿಧರ ಶೆಟ್ಟಿ ಗೆಲುವು ಸಾಧಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.