ರಾಷ್ಟ್ರಿಯ ಭಾವೈಕ್ಯತಾ ಶಿಬಿರದ ಶಿಬಿರಾರ್ಥಿಗಳು ಧರ್ಮಸ್ಥಳ ಭೇಟಿ

Advt_NewsUnder_1
Advt_NewsUnder_1

ಧರ್ಮಸ್ಥಳ: ಸಂಸ್ಕೃತಿ, ಭಾಷೆ, ದೈಹಿಕವಾದ ವಿಭಿನ್ನತೆಗಳಿದ್ದರೂ ಸೃಷ್ಟಿಯ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ನಾವು ಬದುಕಿದ್ದಾಗ ಒಳ್ಳೆಯ ಕಾರ್ಯಗಳನ್ನು ಮಾಡಬೇಕು,ಯಾವುದೇ ವೃತ್ತಿಯನ್ನು ಪ್ರವೇಶಿಸಿದರೂ ಕೂಡ ವಿಧೇಯತೆ ಹಾಗೂ ಸಮರ್ಪಣಾ ಮನೋಭಾವದಿಂದ ಮಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಇವರು ಉಜಿರೆಯ ಎಸ್.ಡಿ.ಯಂ ಸ್ನಾತಕೋತ್ತರ ಕೇಂದ್ರದಲ್ಲಿ ನಡೆಯುತ್ತಿರುವ ರಾಷ್ಟ್ರಿಯ ಭಾವೈಕ್ಯತಾ ಶಿಬಿರದ ಶಿಬಿರಾರ್ಥಿಗಳ ಧರ್ಮಸ್ಥಳ ಭೇಟಿಯ ಸಂಧರ್ಭದಲ್ಲಿ ಮಾತನಾಡಿದರು. ಪರಸ್ಪರ ನಂಬಿಕೆ, ಅರ್ಥೈಸಿಕೊಳ್ಳುವಿಕೆ ಹಾಗು ದೇಶಪ್ರೇಮ ಮೂಡಿಸಲು ಶಿಬಿರಗಳು ಸಹಕಾರಿಯಾಗುತ್ತವೆ. ಮುಂದಿನ ಪೀಳಿಗೆಗೆ ಸಂಪದ್ಭರಿತವಾದ ದೇಶವನ್ನು ವರ್ಗಾಯಿಸುವ ಕಾರ್ಯವನ್ನು ಮಾಡಬೇಕು. ನಮ್ಮ ಸುತ್ತಮುತ್ತಲಿನ ಪ್ರಪಂಚದ ಬಗ್ಗೆ ಮಾತ್ರ ಚಿಂತಿಸದೆ ಒಳಗಣ್ಣನ್ನು ತೆರೆದು ವಿಶಾಲವಾಗಿ ನೊಡುವ ಪ್ರಯತ್ನವಾಗಬೇಕು ಎಂದು ಈ ಸಂಧರ್ಭದಲ್ಲಿ ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮದಲ್ಲಿ 6 ರಾಜ್ಯದ ಶಿಬಿರಾರ್ಥಿಗಳು ಹಾಗು ಯೋಜನಾಧಿಕಾರಿಗಳು ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾದ್ಯಾಪಕರಾಧ ಶ್ರೀನಾಥ್ ಎಂ.ಪಿ ಮತ್ತಿತರು ಉಪಸ್ಥಿತರಿದ್ದರು. ಶಿಬಿರದ ಕಾರ್ಯನಿರ್ವಾಹಣಾಧಿಕಾರಿ ಪ್ರೊ. ಗಣೇಶ್ ಶೆಂಡ್ಯೆ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.