ಪುರಿಯ: ಪ್ರೊ ಕಬಡ್ಡಿ ಪಂದ್ಯಾಟ ‘ವಿಕ್ರಮ್ ಟ್ರೋಪಿ-2018’

ಪುಂಜಾಲಕಟ್ಟೆ: ವಿಕ್ರಮ ಯುವಕ ಮಂಡಲ ಪುರಿಯ ಪುಂಜಾಕಟ್ಟೆ ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ಅವಿಭಜಿತ ದ.ಕ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪುರುಷರ 60 ಕೆ.ಜಿ ವಿಭಾಗದ ಪ್ರೊ ಕಬಡ್ಡಿ ಪಂದ್ಯಾಟ ವಿಕ್ರಮ್ ಟ್ರೋಫಿ-2018  ಪುರಿಯ ಶ್ರೀದೇವಿ ಭಜನಾ ಮಂದಿರದ ವಠಾರದಲ್ಲಿ ಡಿ.22 ರಂದು ಜರುಗಿತು.
ಪಂದ್ಯಾಟವನ್ನು ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಪತ್ ಬಿ ಸುವರ್ಣ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪಾರೆಂಕಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಮೊಕ್ತೆಸರ ರಾಜಶೇಖರ ಶೆಟ್ಟಿ ಭಂಡಾರಿಗುಡ್ಡೆ ವಹಿಸಿದ್ದರು. ಸರಪಾಡಿ ಕ್ಷೇತ್ರದ ಜಿ.ಪಂ ಸದಸ್ಯ ತುಂಗಪ್ಪ ಬಂಗೇರ, ಬಸವನಗುಡಿ ಆಭರಣ ಟಯರ್‍ಸ್ ರಾಜೇಶ್ ಕುಲಾಲ್, ಅಮೆಚೂರು ಕಬಡ್ಡಿ ಅಸೋಸಿಯೇಶನ್ ಪ್ರಭಾಕರ ಹೆಗ್ಡೆ ನಾರಾವಿ, ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪುರಿಯ ಶ್ರೀದೇವಿ ಭಜನಾ ಮಂದಿರದ ಅಧ್ಯಕ್ಷ ರೋಹಿತ್ ಪೂಜರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೃಷ್ಣ ಅರಿಮಣಿತ್ತಾಯ ಮಾಲಾಡಿ, ಮಾಲಾಡಿ ಗ್ರಾ.ಪಂ ಸದಸ್ಯ ಕೃಷ್ಣಪ್ಪ ಪೂಜಾರಿ, ನವುಂಡ ಶ್ರೀ ನಾಗಬ್ರಹ್ಮ ದೇವಸ್ಥಾನದ ಕಾರ್ಯಾಧ್ಯಕ್ಷ ಹಂಸರಾಜ ಬುಣ್ಣು, ಲಿಂಗಪ್ಪ ಟೈಲರ್ ಪುಂಜಾಲಕಟ್ಟೆ, ಮಡಂತ್ಯಾರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಸತೀಶ ಸಾಲಿಯಾನ್ ಮೂಡಬೆಟ್ಟು, ನ್ಯೂ ಫ್ರೆಂಡ್ಸ್ ಕೋಡ್ಯೇಲು ಅಧ್ಯಕ್ಷ ಸತೀಶ್ ಕುಮಾರ್ ಉಪಸ್ಥಿತರಿದ್ದರು. ಪ್ರೋ ಕಬಡ್ಡಿ ಪಂದ್ಯಾಟದಲ್ಲಿ ಸುಮುಖ ಸುದೆಕ್ಕಾರ್ ಗುರುವಾಯನಕೆರೆ ಪ್ರಥಮ, ವಿಕ್ರಮ ಯುವಕ ಮಂಡಲ ದ್ವಿತೀಯ, ಭಾರ್ಗವಿ ಫ್ರೆಂಡ್ಸ್ ಗುರುವಾಯನಕೆರೆ ತೃತೀಯ ಹಾಗೂ ಯಂಗ್‌ಚಾಲೆಂಜರ್‍ಸ್ ಮುಂಡಾಜೆ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.
ಸಂಘದ ಉಪಾಧ್ಯಕ್ಷ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿ, ಸಂಘದ ಅಧ್ಯಕ್ಷ ಅಶೋಕ್ ಕೆ ಕುರಿಯಾಡಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.