ಮಾಲಾಡಿ ಶಾಲಾ ವಾರ್ಷಿಕೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ

ಶಾಲೆಗೆ ಕೊಡುಗೆ ನೀಡಿರುವ ದಾನಿಗಳಾದ ಸಮಾಜ ಸೇವಕ ಹಾಜಿ ಅಬ್ದುಲ್ ಲತೀಫ್ ಸಾಹೇಬ್, ಉದ್ಯಮಿ ನಿತ್ಯಾನಂದ ಹೆಗ್ಡೆ ಕೊಲ್ಪೆದಬೈಲು ಇವರುಗಳನ್ನು ಶಾಲಾಭಿವೃದ್ಧಿ ವತಿಯಿಂದ ಸನ್ಮಾನಿಸಲಾಯಿತು.
ನಿವೃತ್ತ ಮುಖ್ಯೋಪಾಧ್ಯಾಯರುಗಳಾದ ಶ್ರೀಮತಿ ಕೇಶವತಿ, ಕೆ.ಎ.ವೆಂಕಪ್ಪ ಬಂಗೇರ, ಶ್ರೀಮತಿ ಸರೋಜ ಕೆ. ಇವರುಗಳನ್ನು  ಶಾಲಾಭಿವೃದ್ಧಿ ವತಿಯಿಂದ ಸನ್ಮಾನಿಸಲಾಯಿತು.

ಮಾಲಾಡಿ: ಇಲ್ಲಿಯ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮಾಲಾಡಿ ಇದರ ವಾರ್ಷಿಕೋತ್ಸವದ ಸಮಾರೋಪ ಸಮಾರಂಭವು ಇತ್ತೀಚೆಗೆ ಜರುಗಿತು. ಮಾಲಾಡಿ ಗ್ರಾ.ಪಂ ಅಧ್ಯಕ್ಷ ಎಸ್.ಬೇಬಿ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯೆ ಮಮತಾ ಎಂ.ಶೆಟ್ಟಿ, ತಾ.ಪಂ ಸದಸ್ಯ ಜೋಯೆಲ್ ಮೆಂಡೊನ್ಸಾ, ಗ್ರಾ.ಪಂ ಸದಸ್ಯ ವಿಜಯ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಪಡ್ಪು, ಪುಂಜಾಲಕಟ್ಟೆ ವಲಯದ ಸಿ.ಆರ್.ಪಿ ರಘುಪತಿ ಕೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲೆಗೆ ಕೊಡುಗೆ ನೀಡಿರುವ ದಾನಿಗಳಾದ ಸಮಾಜ ಸೇವಕ ಹಾಜಿ ಅಬ್ದುಲ್ ಲತೀಫ್ ಸಾಹೇಬ್, ಉದ್ಯಮಿ ನಿತ್ಯಾನಂದ ಹೆಗ್ಡೆ ಕೊಲ್ಪೆದಬೈಲು, ನಿವೃತ್ತ ಮುಖ್ಯೋಪಾಧ್ಯಾಯರುಗಳಾದ ಶ್ರೀಮತಿ ಕೇಶವತಿ, ಕೆ.ಎ.ವೆಂಕಪ್ಪ ಬಂಗೇರ, ಶ್ರೀಮತಿ ಸರೋಜ ಕೆ. ಹಾಗೂ ಕ್ರೀಡಾಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಲಾಭಿವೃದ್ಧಿ ವತಿಯಿಂದ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕ ಜಯರಾಜ ಜೈನ್ ಸ್ವಾಗತಿಸಿ, ಸಹಶಿಕ್ಷಕ ಪ್ರಶಾಂತ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಹಶಿಕ್ಷಕಿ ಲೀಲಾವತಿ, ಶಾಲಿನಿ ಬರೆಟ್ಟೊ, ಸವಿತಾ.ಕೆ, ಅತಿಥಿ ಶಿಕ್ಷಕಿ ಸುರೇಖ, ಗೌರವ ಶಿಕ್ಷಕಿ ಕು| ದಿವ್ಯಾ ಸನ್ಮಾನಿತರನ್ನು ಪರಿಚಯಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.