ಕೊಕ್ಕಡ-ಪ್ರತಿಭಾ ಸಿಂಚನ ಕಾರ್ಯಕ್ರಮ, ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಕೊಕ್ಕಡ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಂಗಮಂದಿರದಲ್ಲಿ ನಡೆದ ಪ್ರತಿಭಾ ಸಿಂಚನ ಕಾರ್ಯಕ್ರಮವನ್ನು ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ಜೆ.ಸೆಬಾಸ್ಟಿಯನ್ ಜ.2 ರಂದು ಉದ್ಘಾಟಿಸಿದರು.

ನೂತನ ಧ್ವಜಸ್ತಂಭ ಉಧ್ಘಾಟನೆ : ಈ ಸಂದರ್ಭದಲ್ಲಿ ಕೊಕ್ಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉದ್ಯಮಿ ಎಸ್.ಕೆ.ಹಕೀಂ ರವರು ಕೊಡುಗೆಯಾಗಿ ನಿರ್ಮಿಸಿದ ನೂತನ ಧ್ವಜಸ್ತಂಭವನ್ನು ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ಜೆ. ಸೆಬಾಸ್ಟಿನ್ ಉಧ್ಘಾಟಿಸಿದರು.

ಮುಖ್ಯ ಅಥಿತಿಗಳಾಗಿ ಬೆಳ್ತಂಗಡಿ ಬಿ.ಆರ್.ಸಿ ಸಮನ್ವಯಾಧಿಕಾರಿ ಗಣೇಶ್ ಐತಾಳ್ ಮಾತನಾಡಿ ವಿದ್ಯಾರ್ಥಿಗಳ ಮುಂದೆ ಗುರಿ ಇರಬೇಕು, ವಿದ್ಯಾರ್ಥಿಗಳ ಹಿಂದೆ ಗುರುವಿನ ಮಾರ್ಗದರ್ಶನ ಇರಬೇಕು ಇವೆರಡೂ ಇದ್ದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಉತ್ತಮ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಹಿಂದಿನ ತಲೆಮಾರಿನಲ್ಲಿ ಜನರು ಅಕ್ಷರಸ್ಥರಿರಲಿ ಅನಕ್ಷರಸ್ಥರಿರಲಿಒಳ್ಳೆಯ ಸಂಸ್ಕಾರ ಇತ್ತು, ಆದರೆ ಇಂದಿನ ಯುವ ಜನಾಂಗವನ್ನು ಪೋಷಕರು ಕುರುಡು ಪ್ರೀತಿಯಿಂದ ಸಂಸ್ಕಾರ ರಹಿತರನ್ನಾಗಿ ಬೆಳೆಸುವ ಪರಿಸ್ಥಿತಿ ಸಮಾಜಕ್ಕೆ ಮಾರಕ, ಹೆತ್ತವರು ತಮ್ಮ ಮಕ್ಕಳಿಗೆ ತಪ್ಪಿದಾಗ ತಿದ್ದಿ ಸರಿಪಡಿಸುವ ಹಾಗೂ ಮಕ್ಕಳಲ್ಲಿ ಗುರು ಹಿರಿಯರ ಮೇಲೆ ಭಯ ಭಕ್ತಿ ತುಂಬುವ ಕಾರ್ಯ ಮಾಡುವ ಜವಾಬ್ದಾರಿ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ಜನಾಂಗ ಸಂಸ್ಕಾರ ರಹಿತರಾಗುವ ಸಾಧ್ಯತೆ ಇದೆ ಎಂದರು.
ಕೊಕ್ಕಡ ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮೀನಾರಾಯಣ ಟಿ.ಎಂ ಮಾತನಾಡಿ ಸರಕಾರಿ ಶಾಲೆ ಉಳಿಯಬೇಕಾದರೆ ಶಿಕ್ಷಕರು ಮಾತ್ರವಲ್ಲ ಇದರೊಂದಿಗೆ ಪೋಷಕರು ಕೂಡಾ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಿ ಶಾಲೆಯ ಅಗತ್ಯಗಳಿಗೆ ತಮ್ಮದಾದ ನೆರವು ನೀಡಿದಲ್ಲಿ ಮಾತ್ರ ಶಾಲೆ ಉಳಿದಿತು. ನಾನು ಇದೇ ಶಾಲೆಯಲ್ಲಿ ಕಲಿತವಿದ್ಯಾರ್ಥಿ ಅನ್ನುವ ಅಭಿಮಾನದಿಂದ ತನ್ನ ಅನುದಾನವಲ್ಲದೇ ಬೇರೆ ಸದಸ್ಯರ ಅನುದಾನವನ್ನೂ ಈ ಶಾಲೆಗೆ ಕೊಡ ಮಾಡುವ ಮೂಲಕ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ಇಂದು ಖಾಸಗಿ ಶಾಲೆಯ ವ್ಯಾಮೋಹದಿಂದ ಸರಕಾರಿ ಶಾಲೆಗಳ ಅವನತಿಗೆ ನಾವೇ ಕಾರಣರಾಗಿದ್ದೇವೆ, ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಊರ ಗ್ರಾಮಸ್ಥರು ಹಾಗೂ ಇಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಕೊಡುಗೆಗಳನ್ನು ನೀಡಿ ಶಾಲೆಯ ಆಧುನೀಕರಣಕ್ಕೆ ಮುಂದಾಗುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಲಾ ಕೊಠಡಿಯ ಮೇಲ್ಛಾವಣಿಗಳಿಗೆ ತಮ್ಮ ಅನುದಾನವನ್ನು ಕೊಟ್ಟು ಶಾಲೆಯ ಅಭಿವೃದ್ದಿಯಲ್ಲಿ ಪಾತ್ರರಾದ ಕೊಕ್ಕಡ ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮೀನಾರಾಯಣ ಟಿ.ಎಂ. ಇವರನ್ನು ಶಾಲಾ ಶಿಕ್ಷಕ ವರ್ಗ ಹಾಗೂ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಮತ್ತು ಶಾಲೆಗೆ ನೂತನ ಧ್ವಜ ಸ್ತಂಭ ನಿರ್ಮಾಣದ ಕೊಡುಗೆ ನೀಡಿದ ಹಕೀಂ ಎಸ್.ಕೆ ಇವರನ್ನು ಕೂಡ ಸನ್ಮಾನಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಕೊಕ್ಕಡ ಗ್ರಾಮ ಪಂ. ಸದಸ್ಯ ಇಬ್ರಾಹಿಂ.ಇ.ಕೆ, ಸಮೂಹ ಸಂಪನ್ಮೂಲ ಕೇಂದ್ರ ಕೊಕ್ಕಡ ಸಿ.ಆರ್.ಪಿ ವಿಲ್ಫ್ರೆಡ್ ಪಿಂಟೋ, ಹಳ್ಳಿಂಗೇರಿ ಸ.ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಸುಂದರಿ, ಪ್ರತಿಭಾಸಿಂಚನ ಕಾರ್ಯಕ್ರಮ ಸಮಿತಿ ಅಧ್ಯಕ್ಷ ದಾಮೋದರ ಗೌಡ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಪದ್ಮಶ್ರೀ ಎಂ.ವಿ, ಶಾಲಾ ಮುಖ್ಯ ಶಿಕ್ಷಕಿ ಶಾಂತಾ ಎಸ್, ವಿದ್ಯಾರ್ಥಿ ನಾಯಕಿ ನಿಶ್ಮಿತಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶಾಂತಾ ಎಸ್ ಸ್ವಾಗತಿಸಿ, ವಂದಿಸಿದರು. ಶಿಕ್ಷಕಿ ಲೀಲಾ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.