ಇಂದಿರಾ ಆವಾಸ್ ಫಲಾನುಭವಿಗಳಿಗೆ ವಂಚನೆ ಗ್ರಾ.ಪಂ ಮಾಜಿ ಅಧ್ಯಕ್ಷ, ಕಾರ್ಯದರ್ಶಿಗೆ ಶಿಕ್ಷೆ

ಬೆಳ್ತಂಗಡಿ: ಇಂದಿರಾ ಆವಾಸ್ ಯೋಜನೆ ಫಲಾನುಭವಿಗಳಿಗೆ ಮಂಜೂರಾದ ಹಣವನ್ನು ವಂಚಿಸಿದ ಪ್ರಕರಣದಲ್ಲಿ ಹಿಂದಿನ ಗ್ರಾ.ಪಂ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ಬೆಳ್ತಂಗಡಿ ನ್ಯಾಯಾಲಯವು1 ವರ್ಷ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಕಣಿಯೂರು ಗ್ರಾ.ಪಂ.ದಲ್ಲಿ ಈ ಹಿಂದೆ ಕಾರ್ಯದರ್ಶಿಯಾಗಿದ್ದ ಶೀನ ಹಾಗೂ ಆಗಿನ ಅಧ್ಯಕ್ಷರಾಗಿದ್ದ ಅಧ್ಯಕ್ಷ ಮಹೇಶ್ ಶಿಕ್ಷೆಗೊಳಗಾದವರು. 2009 ರಲ್ಲಿ ಇಂದಿರಾ ಆವಾಜ್ ಯೋಜನೆಯಲ್ಲಿ ಬೆಳ್ತಂಗಡಿ ಶಾಖೆಯಿಂದ ರೂ.3.50 ಲಕ್ಷ ಗ್ರಾ.ಪಂನ ಬ್ಯಾಂಕ್ ಖಾತೆಗೆ ಬಂದಿದ್ದು, ಇದನ್ನು ಅಪರಾಧಿಗಳು ದುರುಪಯೋಗ ಪಡಿಸಿಕೊಂಡು, ಚೆಕ್‌ಗೆ ಸಹಿ ಹಾಕಿ ಅದೇ ಬ್ಯಾಂಕ್‌ನಲ್ಲಿದ್ದ ಕಾರ್ಯದರ್ಶಿ ಖಾತೆಗೆ ಹಣ ವರ್ಗಾಯಿಸಿಕೊಂಡು ಫಲಾನುಭವಿಗಳಿಗೆ ವಂಚಿಸಿದ್ದರು ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ಫಲಾನುಭವಿಗಳು ನೀಡಿದ ದೂರಿನಂತೆ ತನಿಖೆ ನಡೆಸಿದ ಪುತ್ತೂರು ಗ್ರಾಮಾಂತರ ವೃತ್ತದ ಅಂದಿನ ನಿರೀಕ್ಷಕರಾದ ಕೆ. ನಾಗೇಶ್ ಹಾಗೂ ಬಿ.ಕೆ ಮಂಜಯ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಬೆಳ್ತಂಗಡಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಬಿ.ಕೆ ಕೋಮಲಾ ಅವರು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.