ಕಲಾಯಗುತ್ತು ಮನೆಯಲ್ಲಿ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮ ಹಾಗೂ ಯಕ್ಷಗಾನ

Advt_NewsUnder_1
Advt_NewsUnder_1
Advt_NewsUnder_1

ಪುತ್ತಿಲ: ಇಲ್ಲಿಯ ಕಲಾಯ ಗುತ್ತು ಮನೆ ಶ್ರೀಮತಿ ಸರೋಜಿನಿ ಮತ್ತು ಮೋನಪ್ಪ ಪೂಜಾರಿಯವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವವು ಡಿ.29 ರಂದು ಕಲಾಯಗುತ್ತಿನಲ್ಲಿ ಜರಗಿತು. ಬೆಳಿಗ್ಗೆ ಗಣಪತಿ ಹೋಮ, ದುರ್ಗಾಹೋಮ, ಸತ್ಯನಾರಾಯಣ ಪೂಜೆ ಜರುಗಿ, ಸಂಜೆ ಧರ್ಮಸ್ಥಳ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರದ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಗುರುವಂದನಾ ಕಾರ್ಯಕ್ರಮ ಜರುಗಿತು. ನಂತರ ಆಶೀರ್ವಚನ ನೀಡಿದ ಸ್ವಾಮೀಜಿಯವರು ಶುದ್ಧ ಮನಸ್ಸಿನಿಂದ ಮಾಡಿದ ಎಲ್ಲಾ ಕೆಲಸಗಳು ಸಫಲತೆಯನ್ನು ಹೊಂದುತ್ತದೆ. ನಾವು ಇತರರ ಏಳಿಗೆಯನ್ನು ನೋಡಿ ಅಸೂಯೆ ಪಡದೆ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾದಾಗ ನಮ್ಮ ಏಳಿಗೆ ಸಾಧ್ಯ. ಆಗ ಮಾತ್ರ ನಮ್ಮನ್ನು ಇತರರು ಗೌರವಿಸುತ್ತಾರೆ ಎಂದು ನುಡಿದರು.
ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಜರುಗಿತು. ಈ ಸಂದರ್ಭ ಶಾಸಕ ಹರೀಶ್ ಪೂಂಜಾ, ಮತ್ತಿತರ ಗಣ್ಯರು, ಬಂಧುವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.