ಬೆಳ್ತಂಗಡಿ ತಾ| 16ನೇಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ.ರಾ ಶಾಸ್ತ್ರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕನ್ನಡ ಸಾಹಿತ್ಯ ಪರಿಷತ್ತು ದ.ಕ ಇದರ ಬೆಳ್ತಂಗಡಿ ತಾ| ಘಟಕದ ವತಿಯಿಂದ ಜ. 16 ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ 16ನೇಯ ಬೆಳ್ತಂಗಡಿ ತಾ| ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿಗಳು ಹಾಗೂ ಬರಹಗಾರರಾಗಿರುವ ಪ. ರಾಮಕೃಷ್ಣ ಶಾಸ್ತ್ರಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮತ್ತು ತಾ| ಕಸಾಪ ಅಧ್ಯಕ್ಷ ಡಾ. ಬಿ ಯಶೋವರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಕ್ಷಿಪ್ತ ಪರಿಚಯ:
ಮೂಲತಃ ಪುತ್ತೂರು ತಾ| ಕಬಕ ಪೊಳ್ಯ ನಿವಾಸಿಯಾಗಿರುವ ಪ.ರಾ ಶಾಸ್ತ್ರಿ ಯವರು ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿ ಕೆಲವರ್ಷ ನೆಲೆಸಿ ಪ್ರಸ್ತುತ ತೆಂಕಕಾರಂದೂರು ಗ್ರಾಮದ ಪೆರಾಲ್ದರಕಟ್ಟೆಯಲ್ಲಿ ವಾಸವಾಗಿದ್ದಾರೆ.
ಆಗಿನ ಶಿಕ್ಷಣ ವ್ಯವಸ್ಥೆಯಲ್ಲಿ ನೇರವಾಗಿ ೫ನೇ ತರಗತಿಗೆ ಶಾಲೆಗೆ ಸೇರಿದ್ದರು. ಅವರ 11ನೇ ವರ್ಷದಲ್ಲೇ ಬೆಂಗಳೂರಿನ ಗೋಕುಲ ಪತ್ರಿಕೆಯಲ್ಲಿ ಅವರ ಮೊದಲ ಲೇಖನ ಪ್ರಕಟಗೊಂಡಿತ್ತು. ಮಚ್ಚಿನದಲ್ಲಿ ನೆಲೆಸಿದ ಬಳಿಕ ಬರಹಗಾರಿಕೆಯಲ್ಲಿ ತೊಡಗಿಸಿಕೊಂಡ ಅವರ ಈಗಾಗಲೇ ಒಟ್ಟು 72 ಪುಸ್ತಕಗಳು ಪ್ರಕಟಗೊಂಡಿವೆ. ನಾಡಿನ ಸುಮಾರು 60 ಕ್ಕೂ ಅಧಿಕ ದಿನಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ, ಪಾಕ್ಷಿಕ ಮತ್ತು ಮಾಸಿಕಗಳಲ್ಲಿ ಅವರ ಕೃಷಿ ಹಾಗೂ ವೈಚಾರಿಕ ಲೇಖನ, ಹಾಸ್ಯ ಲೇಖನ, ನುಡಿಚಿತ್ರ, ಕವನ, ಕಾದಂಬರಿ, ಸಾಧಕರ ಪರಿಚಯ ಸಹಿತ ವಿವಿಧ ವಿಚಾರಗಳ ಬಗ್ಗೆ ಒಟ್ಟು 11 ಸಾವಿರ ಲೇಖನಗಳು ಪ್ರಕಟಗೊಂಡಿವೆ. ಅವರ ಬರಹಗಳಲ್ಲಿ ಸುಮಾರು 3 ಸಾವಿರದಷ್ಟು ಮಕ್ಕಳ ಕಥೆ ಒಳಗೊಂಡಿರುವುದು ಉಲ್ಲೇಖಾರ್ಹ. ಅವರ ತುಳು ಕಾದಂಬರಿ ಪುದ್ವರ್ ಇದಕ್ಕೆ ಪಣಿಯಾಡಿ ಪ್ರಶಸ್ತಿ ಸಹಿತ ಇನ್ನೂ ಅನೇಕ ಕೃತಿಗಳಿಗೆ ಪ್ರಶಸ್ತಿಗಳು ಲಭಿಸಿವೆ. ಅವರ ಕಥೆ ಮಹಾರಾಷ್ಟ್ರ ಸರಕಾರದ ಮಾನ್ಯತೆಗೊಳಗಾಗಿ ಅಲ್ಲಿನ 5-6 ತರಗತಿ ಮಕ್ಕಳಿಗೆ ಪಠ್ಯವಾಗಿ ಈಗಲೂ ಬೋದಿಸಲ್ಪಡುತ್ತಿದೆ.
ಮಂಗಳೂರು ವಿವಿ ಯಿಂದಲೂ ಅವರ ಮೂರು ವೈಚಾರಿಕ ಲೇಖನಗಳನ್ನು ಸೇರಿಸಿದ ಬರಹ ಪದವಿ ವಿದ್ಯಾರ್ಥಿಗಳ ಪಠ್ಯವಾಗಿದೆ. ಅರಣ್ಯ ಇಲಾಖೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪರಿಸರ ಘೋಷಣೆಗೆ ರಾಷ್ಟ್ರಮಟ್ಟದ ಬಹುಮಾನ ಕೂಡ ಲಭಿಸಿದೆ. ಮಕ್ಕಳ ಸಾಹಿತ್ಯ ಕ್ಷೇತ್ರ ಸೇರಿದಂತೆ ಅನೇಕ ಕಡೆಗಳಲ್ಲಿ ಅವರು ತಮ್ಮ ವಿದ್ವತ್ ಉಪನ್ಯಾಸ ನೀಡಿದ್ದಾರೆ. ತಾಲೂಕು ಜಿಲ್ಲಾ ಸಮ್ಮೇಳನಗಳ ಕವನ-ಕಥಾ ಗೋಷ್ಠಿಗಳಲ್ಲಿ ಅವರು ಅಧ್ಯಕ್ಷತೆ ಮತ್ತು ಉಪನ್ಯಾಸ ನೀಡಿದ್ದಾರೆ. ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿ ಪ್ರೌಢಿಮೆ ಮೆರೆದಿದ್ದಾರೆ.
ಪ್ರಸ್ತು ಅವರು ಪತ್ನಿ ಗೃಹಿಣಿ ಶಾರದಾ ಜೊತೆ ಪೆರಾಲ್ದರಕಟ್ಟೆಯಲ್ಲಿ ನೆಲೆಸಿದ್ದಾರೆ. ಮೂವರು ಮಕ್ಕಳ ಪೈಕಿ ಹಿರಿಯ ಪುತ್ರ ವೆಂಕಟೇಶ್ ಶಾಸ್ತ್ರಿ ಸಂಸ್ಕೃತದಲ್ಲಿ ಎಂ.ಎ ಪದವೀಧರರಾಗಿದ್ದು ಸುಳ್ಯ ಸಂಸ್ಕೃತವೇದ ಪಾಠಶಾಲೆಯಲ್ಲಿ ಬೋಧಕರಾಗಿದ್ದಾರೆ. ಪುತ್ರಿ ಗುಣಮಾಲಿನಿಯನ್ನು ಸುಲ್ಕೇರಿ ಶಾಲಾ ಶಿಕ್ಷಕ ಸುಬ್ರಹ್ಮಣ್ಯ ಭಟ್ ಅವರಿಗೆ ವಿವಾಹ ಮಾಡಿಕೊಡಲಾಗಿದ್ದು, ಕಿರಿಯ ಪುತ್ರ, ಪತ್ರಕರ್ತ ಲಕ್ಷ್ಮೀ ಮಚ್ಚಿನ ಉದಯವಾಣಿ ಕುಂದಾಪುರ ಬ್ಯೂರೋದಲ್ಲಿ ಉಪಮುಖ್ಯ ವರದಿಗಾರರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.