ವಿದ್ಯುತ್ ಗುತ್ತಿಗೆದಾರ ಅಣ್ಣಿ ಗೌಡ ಬೆಳಾಲು ಅಸಹಜ ಸಾವು

ಬೆಳಾಲು: ಇಲ್ಲಿನ ಮಾಯಾ ನಿವಾಸಿ, ವಿದ್ಯುತ್ ಗುತ್ತಿಗೆದಾರ ಅಣ್ಣಿ ಗೌಡ(60ವ.) ಅವರು ಅಸಹಜವಾಗಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹ ಬೆಳಾಲು ಗ್ರಾಮ ಮಾಯ ಕಾಡು ಅವರ ಮನೆಗೆ ತೆರಳುವ ರಸ್ತೆ ಬದಿ ಡಿ. 31 ರಂದು ಪತ್ತೆಯಾಗಿದೆ. ಅವರ ಮೃತದೇಹದ ಬಳಿ ಕೀಟನಾಶಕ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ.
ಡಿ. 30 ರಂದು ಅಪರಾಹ್ನ ವೇಳೆ ಅವರನ್ನು ಮಾಯಾ ತಿರುವು ರಸ್ತೆಯ ಕೂಡಲ್‌ಕೆರೆ ಪ್ರಯಾಣಿಕರ ತಂಗುದಾಣದ ಬಳಿ ಅನೇಕ ಮಂದಿ ನೋಡಿದ್ದಾರೆ. ಆದರೆ ಅಂದು ಸಂಜೆ ಅವರು ಮನೆಗೆ ವಾಪಾಸಾಗಿರಲಿಲ್ಲ. ಆ ಹಿನ್ನೆಲೆಯಲ್ಲಿ ರಾತ್ರಿ ಮತ್ತು ಇಂದು ಬೆಳಿಗ್ಗೆ ಹುಡುಕಾಡಿದ್ದರು. ಇಂದು ಬೆಳಿಗ್ಗೆ ಅವರ ಬೈಕ್ ನಿಂತಿದ್ದ ಪ್ರದೇಶದಲ್ಲಿ ಹುಡುಕಾಡಿದಾಗ ಅವರ ಮೃತದೇಹ ರಸ್ತೆಗಿಂತ ಸ್ವಲ್ಪ ಒಳಗೆ ಕಾಡಿನಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಪೋಲಿಸರ ಭೇಟಿ.
ಮೃತರು ಪತ್ನಿ, ಬೆಳಾಲು ಗ್ರಾ.ಪಂ.ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ, ಏಕೈಕ ಪುತ್ರ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅವಿನಾಶ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.