ಬಳ್ಳಮಂಜ ಶೇಷ- ನಾಗ ಜೋಡುಕರೆ ಕಂಬಳ ಉದ್ಘಾಟನೆ

Advt_NewsUnder_1
Advt_NewsUnder_1

ಮಚ್ಚಿನ: ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರಬಾಕಿಮಾರು ಗದ್ದೆಯಲ್ಲಿ ದ.ಕ ಜಿಲ್ಲೆಯ ಸುಪ್ರಸಿದ್ದ ಶೇಷ-ನಾಗ ಜೋಡುಕರೆ ಕಂಬಳ ಡಿ. 30 ರಂದು ನಡೆಯಿತು.ಗುರುವಾಯನಕೆರೆ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರೂ ಆಗಿರುವ ನೋಟರಿ ನ್ಯಾಯವಾದಿ ಭಗೀರಥ ಜಿ ಕಂಬಳ ಉದ್ಘಾಟನೆ ನೆರವೇರಿಸಿದರು.
ಅಧ್ಯಕ್ಷತೆಯನ್ನು ಮಚ್ಚಿನ ಗ್ರಾ.ಪಂ ಅಧ್ಯಕ್ಷೆ ಹರ್ಷಲತಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಮಣ್ಣ ಪೂಜಾರಿ ಕೋಟೆಗುತ್ತು, ಕಂಬಳ ಸಮಿತಿ ಅಧ್ಯಕ್ಷರೂ ಆಗಿರುವ ವಿಜಯ ಬ್ಯಾಂಕ್ ಹೌಸಿಂಗ್ ಫೈನಾನ್ಸ್ ನಿವೃತ್ತ ಡಿಜಿಎಂ ಎಚ್ ಸುಬ್ಬಯ್ಯ ಶೆಟ್ಟಿ ಕೋರಬೆಟ್ಟು, ಕಾರ್ಯದರ್ಶಿ ಕುಮಾರಯ್ಯ ನಾಕ ಮಾಯಿಲೋಡಿ, ಕೋಶಾಧಿಕಾರಿ ಸಂಜೀವ ಮಾಯಿಲೋಡಿ ಹಾಗೂ ಸಮಿತಿ ಸದಸ್ಯರುಗಳು, ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ.ಎಂ ಹರ್ಷ ಸಂಪಿಗೆತ್ತಾಯ ಮೊದಲಾದವರು ಉಪಸ್ಥಿತರಿದ್ದರು.
ಕಂಬಳದ ಫ್ಯಾಗ್ ತೀರ್ಪುಗಾರರಾಗಿ ಸಂಜೀವ ಶೆಟ್ಟಿ ಮುಗೆರೋಡಿ, ವಸಂತ ಪದ್ಮನಾಭ ಕಾರಂದೂರು ಮತ್ತು ಜನಾರ್ದನ ಕರ್ಪೆ ಕರ್ತವ್ಯ ನಿರ್ವಹಿಸಿದರು. ತೀರ್ಪುಗಾರರಾಗಿ ರಾಜೀವ ಶೆಟ್ಟಿ ಎಡ್ತೂರು, ಕೆ.ಧರಣೇಂದ್ರ ಕೆ ಜೈನ್ ಮದ್ದಡ್ಕ, ಬಿ ನಿರಂಜನ್ ರೈ ಮಟಂದಬೆಟ್ಟು, ಪ್ರಕಾಶ್ ಕಜೆಕ್ಕಾರು, ವಸಂತ ಗೌಡ ಮರಕಡ ಬೆಳ್ತಂಗಡಿ ಸಹಯೋಗ ನೀಡಿದರು.

ಕಂಬಳ ನಮ್ಮ ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆ. ಇದರಲ್ಲಿ ಹಿಂಸೆಯ ಪ್ರಶ್ನೆಯೇ ಬರುವುದಿಲ್ಲ. ಈ ಕ್ರೀಡೆ ತುಳುನಾಡಿನಲ್ಲಿ ಅನಾದಿ ಕಾಲದಿಂದಲೂ ನಡೆದುಬಂದಿದೆ. ಈ ಕ್ರೀಡೆಗೆ ಸರ್ವೋಚ್ಚ ನ್ಯಾಯಾಲಯ ಕೂಡ ಹಸಿರು ನಿಶಾನೆ ತೋರಿರುವುದು ಗಮನಾರ್ಹ. ಈ ಕ್ರೀಡೆ ಅಳಿದುಹೋಗದಂತೆ ನಾವೆಲ್ಲರೂ ಶ್ರಮಿಸಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಶ್ರೀ ಅನಂತೇಶ್ವರ ಸ್ವಾಮಿ ಕಂಬಳ ಸಮಿತಿ ಬಳ್ಳಮಂಜ ಮಚ್ಚಿನ ಇದರ ವತಿಯಿಂದ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರಬಾಕಿಮಾರು ಗದ್ದೆಯಲ್ಲಿ ನಡೆಸಿಕೊಂಡು ಬರುತ್ತಿರುವ 21 ನೇ ವರ್ಷದ ಶೇಷ- ನಾಗ ಜೋಡುಕರೆ ಕಂಬಳದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮಚ್ಚಿನ ಗ್ರಾ.ಪಂ ಉಪಾಧ್ಯಕ್ಷ ಚಂದ್ರಶೇಖರ ಬಿ.ಎಸ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಾಜಶೇಖರ್ ಶೆಟ್ಟಿ, ಉದ್ಯಮಿ ಹೈದರ್ ಎಂ. ಆರ್, ಉಪ್ಪಿನಂಗಡಿ ಬಿಳಿಯೂರುಗುತ್ತು ಧನ್ಯ ಕುಮಾರ್ ರೈ, ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮಾಲಕ ಮೋಹನ ಚೌದ್ರಿ, ವಸಂತಿ ಪೂಜಾರಿ ಕುಂಡಡ್ಕ, ತಾ.ಪಂ ಸದಸ್ಯರಾದ ವಸಂತಿ ಲಕ್ಷ್ಮಣ್ ಮತ್ತು ಅಮಿತಾ ಕುಶಾಲಪ್ಪ ಮೊದಲಾದವರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಡಾ. ಹರ್ಷ ಸಂಪಿಗೆತ್ತಾಯ ಹಾಜರಿದ್ದರು.
ಕಂಬಳ ಸಮಿತಿ ಅಧ್ಯಕ್ಷ ಎಚ್. ಸುಬ್ಬಯ್ಯ ಶೆಟ್ಟಿ ಕೋರಬೆಟ್ಟು, ಕಾರ್ಯದರ್ಶಿ ಕುಮಾರಯ್ಯ ನಾಯ್ಕ ಮಾಯಿಲೋಡಿ, ಕೋಶಾಧಿಕಾರಿ ಸಂಜೀವ
ಮಾಯಿಲೋಡಿ ಹಾಗೂ ಕಂಬಳ ಸಮಿತಿ ಸದಸ್ಯರುಗಳು ಸಹಕಾರ ನೀಡಿದರು.
ಮಚ್ಚಿನ ಗ್ರಾ. ಪಂ ಸದಸ್ಯ ಪ್ರಮೋದ್ ಕುಮಾರ್ ಸ್ವಾಗತಿಸಿದರು. ಸದಾಶಿವ ಹೆಗ್ಡೆ ನಿರೂಪಿಸಿದರು. ರಾಜೀವ ಶೆಟ್ಟಿ ಎಡ್ತೂರು ವಂದನಾರ್ಪಣೆಗೈದರು.ಬಂಗೇರ ಭೇಟಿ: ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಸಂಜೆ ವೇಳೆ ಕಂಬಳದ ಸಭಾ ವೇದಿಕೆಗೆ ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿ ನಿರ್ಗಮಿಸಿದರು.

ಬಳ್ಳಮಂಜ: ಕಂಬಳದ ಫಲಿತಾಂಶ
ಮಚ್ಚಿನ: ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರಬಾಕಿಮಾರು ಗದ್ದೆಯಲ್ಲಿ ದ.ಕ ಜಿಲ್ಲೆಯ ಸುಪ್ರಸಿದ್ದ ಶೇಷ-ನಾಗ ಜೋಡುಕರೆ ಕಂಬಳ ಫಲಿತಾಂಶ ಈ ಕೆಳಗಿನಂತಿದೆ.
ಹಗ್ಗ ಹಿರಿಯ: ಪ್ರಥಮ-ಬಳ್ಳಮಂಜ ಗಂಗಯ್ಯ ಮೂಲ್ಯ (ಓಡಿಸಿದವರು: ಉಜಿರೆ ಇಚ್ಚಾವು ದೇರಣ್ಣ ನಾಯ್ಕ) ದ್ವಿತೀಯ- ಕನಡ್ತ್ಯಾರು ಕೃಷ್ಣ ಶೆಟ್ಟಿ (ಓಡಿಸಿದವರು: ಬಂಗಾಡಿ ಮಹಮ್ಮದ್), ಹಗ್ಗ ಕಿರಿಯ: ಪ್ರಥಮ- ಗೋಳ್ತಮಜಲು ಮಾನ್ವಿ ನಿಲಯ ಸುನಿಲ್ ಅಂಚನ್(ಓಡಿಸಿದವರು: ಕನ್ನಡಿಕಟ್ಟೆ ಮಹಮ್ಮದ್), ದ್ವಿತೀಯ- ಕೊಳ್ನಾಡು ಹಿರಿಯಡ್ಕ ದೇವದಾಸ ಕೃಷ್ಣ ಗೌಡ (ಓಡಿಸಿದವರು: ಉಜಿರೆ ಇಚ್ಚಾವು ದೇರಣ್ಣ ನಾಯ್ಕ), ನೇಗಿಲು ಹಿರಿಯ: ಪ್ರಥಮ-ಮಾರ್ನಾಡು ಗುಡ್ಡದಮೇಲು ಎಸ್.ಕೆ ರಾಜೇಶ್ ಸಾಲಿಯಾನ್ (ಓಡಿಸಿದವರು: ಕನ್ನಡಿಕಟ್ಟೆ ಮಹಮ್ಮದ್), ದ್ವಿತೀಯ: ಕನಡ್ತ್ಯಾರು ಕೃಷ್ಣ ಶೆಟ್ಟಿ (ಓಡಿಸಿದವರು: ಅಳದಂಗಡಿ ಗಿರೀಶ್), ನೇಗಿಲು ಕಿರಿಯ: ಪ್ರಥಮ- ಸುರ್ಯ ಕುದುರು ರಾಜು ವೆಂಕಪ್ಪ ಗೌಡ (ಓಡಿಸಿದವರು: ಅಳಿಯೂರು ರಾಜೇಶ), ದ್ವಿತೀಯ-ಕಾರಿಂಜ ಕೊಂಬೇಲು ಪ್ರಶಾಂತ್ ಕುಮಾರ್ (ಓಡಿಸಿದವರು: ಕೆರುವಾಸೆ ಪ್ರವೀಣ್ ಕುಮಾರ್), ಅಡ್ಡ ಹಲಗೆ ಒಂದು ಜೊತೆ ಮಾತ್ರ: ಹಂಕರ್ಜಾಲು ಶ್ರೀನಿವಾಸ ಬಿರ್ಮಣ ಶೆಟ್ಟಿ (ಓಡಿಸಿದವರು: ಮುಳಿಕ್ಕಾರು ಕೆವುಡೇಲು ಅಣ್ಣಿ ದೇವಾಡಿಗ).

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.