ಪೆರ್ಲ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯಿಂದ ಭಜನೋತ್ಸವ

ಶಿಬಾಜೆ: ಇಲ್ಲಿಯ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಪೆರ್ಲ ಇದರ 35ನೇ ವರ್ಷಾಚರಣೆಯ ಪ್ರಯುಕ್ತ ಭಜನೋತ್ಸವ -2018 ಕಾರ್ಯಕ್ರಮವು ಡಿ.30ರಂದು ಜರುಗಿತು. ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
 ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಶಿಬಾಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಧರ ರಾವ್ ಅಜಿರಡ್ಕ, ಪುತ್ತೂರಿನ ಉದ್ಯಮಿ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು. ರಾಜ್ಯ ಸಂಸ್ಕಾರ ಭಾರತಿ ಲೋಕ ಕಲಾವಿಭಾಗ ಪ್ರಮುಖ್ ದಯಾನಂದ ಜಿ.ಕತ್ತಲ್‌ಸಾರ್ ಧಾರ್ಮಿಕ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಶಿಬಾಜೆ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಬಿ.ಸಚ್ಚಿದಾನಂದ ಭಟ್ ಬಟ್ಟಾಜೆ, ಪೆರ್ಲ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಸ್ಥಳದಾನಿ ಲೋಕಯ್ಯ ಗೌಡ ತಂಬ್ಲಾಜೆ, ಅರಸಿನಮಕ್ಕಿ ದೂರವಾಣಿ ವಿನಿಮಯ ಕೇಂದ್ರದ ನಿವೃತ್ತ ತಾಂತ್ರಿಕರಾದ ಕಾಂತಪ್ಪ ಪೂವಾಜೆ ಇವರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಅಶೋಕ ಎಂ.ಕೆ, ಉಪಾಧ್ಯಕ್ಷ ಸುಧಾಕರ ಶೆಟ್ಟಿಗಾರ್, ಕಾರ್ಯದರ್ಶಿ ಯೋಗಿಶ ಟಿ.ಎನ್, ಸದಸ್ಯರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.