HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಉಜಿರೆಯಲ್ಲಿ ಹಿರಿಯ ನಾಗರಿಕರ ಪ್ರಬುದ್ಧ ಸಮಾವೇಶ

 

ಬೆಳ್ತಂಗಡಿ: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ತಾಲೂಕು ಶಾಖೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆ , ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಕೀಲರ ಸಂಘ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಹಿರಿಯ ನಾಗರಿಕರ ಪ್ರಬುದ್ಧ ಸಮಾವೇಶ  ಡಿ. 29 ರಂದು ಉಜಿರೆ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಯು.ವಿಜಯ ರಾಘವ ಪಡ್ವೆಟ್ನಾಯ ನೆರವೇರಿಸಿದರು.

 ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ವಿಠಲ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಕೆ ಸುಂದರ ಪೂಜಾರಿ, ಆರೋಗ್ಯ ಮಾಹಿತಿಗಾಗಿ ಡಾ.ಸಂತೋಷ್ ಕೆ ಯಾಟ್ ನಟ್ಟಿ ಕಾನೂನು ಮಾಹಿತಿಗಾಗಿ ಜಿಲ್ಲಾ ನ್ಯಾಯಾಧೀಶ ಮಲ್ಲಣ್ಣ ಗೌಡ ಪಾಟೀಲ್ ಮತ್ತು ವಕೀಲೆ ಆರ್ ಸುಭಾಷಿಣಿ ಅನಂತ್, ಅರ್ಜಿಗಳ ವಿಲೇ ಮಾಹಿತಿಗಾಗಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.  ಸಂಘದ ಉಪಾಧ್ಯಕ್ಷೆ ಶ್ರೀಮತಿ ಧನಲಕ್ಷ್ಮೀ, ಕಾರ್ಯದರ್ಶಿ ಹೆಚ್ ಪದ್ಮಕುಮಾರ್,  ಕೋಶಾಧಿಕಾರಿ ವಿಶ್ವಾಸ ರಾವ್, ಉಪಾಧ್ಯಕ್ಷ ಸನ್ಮತ್ ಕುಮಾರ್,  ಜೊತೆ ಕಾರ್ಯದರ್ಶಿ ಶ್ರೀಮತಿ ಐರಿನ್ ಪಿಂಟೊ ಮತ್ತಿತರರು  ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಕೊಕ್ಕಡ ಸೇವಾಧಾಮದ ಕಾರ್ಯದರ್ಶಿ ವಿನಾಯಕ ರಾವ್, ಗಂಡಿಬಾಗಿಲು ನೆರಿಯ ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಯು.ಸಿ ಪೌಲೋಸ್, ಕಡಿರುದ್ಯಾವರ ಶ್ರೀ ವಿದ್ಯಾಸರಸ್ವತಿ ಮಕ್ಕಳ ಪಾಲನಾ ಪೋಷಣ ಕೇಂದ್ರದ  ಅಧ್ಯಕ್ಷೆ ಶ್ರೀಮತಿ ಲೋಕೇಶ್ವರಿ ವಿನಯಚಂದ್ರ, ಮಾಜಿ ಸೈನಿಕ ರಾಜೀವ ರೈ ಬಾರ್ಯ, ತೂಗುಸೇತುವೆ ಕರ್ತೃ ನಿವೃತ್ತ ಕಿರಿಯ ಇಂಜಿನಿಯರ್ ಕೂಸಪ್ಪ ಗೌಡ ಉದಯನಗರ, ಶಾಲಾ ಮಕ್ಕಳಿಗಾಗಿ ಹಗ್ಗದ ಕಾಲುಸೇತುವೆಯ ಕರ್ತೃ ಬಾಲಕೃಷ್ಣ ಎಂ.ಕೆ ಶಿಶಿಲ ಇವರುಗಳನ್ನು ಸನ್ಮಾಸಲಾಯಿತು.

 

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.