ಬೆಳ್ತಂಗಡಿ: ಚಿಣ್ಣರಮೇಳ

ಬೆಳ್ತಂಗಡಿ: ವಿದ್ಯಾರ್ಥಿಗಳ ವ್ಯಕ್ತಿತ್ವ , ಪ್ರತಿಭೆಗಳು ವಿಕಸನಗೊಳ್ಳಲು ಚಿಣ್ಣರಮೇಳ ಉತ್ತಮ ಮಾಧ್ಯಮವಾಗಿದೆ ಎಂದು ಅಖಿಲ ಭಾರತ ವಕೀಲರ ಸಂಘದ ( AILU) ದ.ಕ ಜಿಲ್ಲಾಧ್ಯಕ್ಷ , ಹಿರಿಯ ನ್ಯಾಯವಾದಿ ಯಶವಂತ ಮರೋಳಿ ಹೇಳಿದರು. ಅವರು  ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜರುಗಿದ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ಶ್ರಮಶಕ್ತಿ ಸ್ವಸಹಾಯ ಗುಂಪು ಇದರ ಮಕ್ಕಳ ಚಿಣ್ಣರಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮೊಬೈಲ್, ಟಿ.ವಿ ಮಾಧ್ಯಮಗಳಿಂದ ಮೂಲ ಜನಪದ ಸಂಸ್ಕೃತಿಗಳು ಮಾಯವಾಗುತ್ತಿದೆ. ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಗುರುತಿಸಲು ಪ್ರೋತ್ಸಾಹ , ಅವಕಾಶಗಳನ್ನು ಒದಗಿಸಿದರೆ ಇನ್ನಷ್ಟು ವಿಕಸನಗೊಳ್ಳಬಹುದು . ಸರ್ಕಾರಗಳು ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ , ಆಗ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಎಸ್. ಎಂ ವಹಿಸಿದ್ದರು. ವೇದಿಕೆಯಲ್ಲಿ ಎಸ್.ಡಿ.ಎಂ ಕಾನೂನು ಕಾಲೇಜಿನ ಉಪನ್ಯಾಸಕಿ ಪ್ರೋ| ರೇಷ್ಮ , ಹಿರಿಯ ನ್ಯಾಯವಾದಿ ಶಿವಕುಮಾರ್ ಎಸ್. ಎಂ , ನಾಡಿನ ಪ್ರಸಿದ್ಧ ಹಾಡುಗಾರ ನಾದ ಮಣಿನಾಲ್ಕೂರು , ಸಂಪನ್ಮೂಲ ವ್ಯಕ್ತಿ  ಕಲಾವಿದ ಪ್ರಶಾಂತ್ ಬೆಳ್ತಂಗಡಿ ಉಪಸ್ಥಿತರಿದ್ದರು.

ಆಶಾ ಸುಜೀತ್ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು. ಶ್ರಮಶಕ್ತಿ ಸ್ವಸಹಾಯ ಗುಂಪಿನ ಮೇಲ್ವಿಚಾರಕ ಸಂಜೀವ ಆರ್ ಇರ್ವತ್ತೂರು ವಂದಿಸಿದರು. ಚಿಣ್ಣರಮೇಳದಲ್ಲಿ ನಾಡಿನ ಹಿರಿಯ ಕಲಾವಿದ , ಹಾಡುಗಾರ ನಾದ ಮಣಿನಾಲ್ಕೂರು ಅವರ ಹಾಡುಗಳು , ಪ್ರಶಾಂತ್ ಬೆಳ್ತಂಗಡಿ ಅವರ ಚಿತ್ರಕಲೆ , ಶಿಕ್ಷಕ ಗೋಪಾಲಕೃಷ್ಣ ಸಾಮಂತ್ ಗೊಂಬೆ ತಯಾರಿ ತರಬೇತಿ ನೀಡಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.