ಬದನಾಜೆ ಶಾಲಾಮುಖ್ಯೋಪಾಧ್ಯಾಯ ಬಿ.ಲಕ್ಷ್ಮಣ ಪೂಜಾರಿ ವಯೋನಿವೃತ್ತಿ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬದನಾಜೆ ಇಲ್ಲಿಯ ಮುಖ್ಯೋಪಾಧ್ಯಾಯರಾದ ಬಿ.ಲಕ್ಷ್ಮಣ ಪೂಜಾರಿ ಇವರು ಡಿ. 31 ರಂದು ವಯೋನಿವೃತ್ತಿ ಹೊಂದಲಿದ್ದಾರೆ.
ಇವರು ಇಚ್ಲಂಪಾಡಿ ಬದನೆಗುತ್ತು ಬಿ.ದಾಸಪ್ಪ ಪೂಜಾರಿ ಮತ್ತು ನಾಟಿವೈದ್ಯ ಹೊನ್ನಮ್ಮ ದಂಪತಿ ಪುತ್ರರಾಗಿ ಜನಿಸಿ 1985 ರಿಂದ 1992 ರವರೆಗೆ ನೇರ್ಲ ಸರಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, 1992 ರಿಂದ ಲಾಯಿಲ ಪಡ್ಲಾಡಿ ಶಾಲಾ ಶಿಕ್ಷಕರಾಗಿ 2002 ರಿಂದ 2006 ರವರೆಗೆ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿ 2006 ರವರೆಗೆ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿ 2006 ರಿಂದ ಬದನಾಜೆ ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿರುತ್ತಾರೆ.
ಶಿಕ್ಷಕರೊಂದಿಗೆ ಶಾಲಾಕೈತೋಟ, ನಾಟಕ ಅಭಿನಯ, ನಾಟಕ ರಚನೆ, ಹನಿಗವನ ರಚನೆ, ಜನಪದ ಗೀತೆಯಲ್ಲಿ ರಾಜ್ಯಮಟ್ಟದ ಕ್ರೀಡಾಪಟುವಾಗಿದ್ದರು.
2001ರಲ್ಲಿ ತಾಲೂಕಿನ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಇವರು ನೆಲ್ಯಾಡಿ ಜೆಸಿಐ, ಲಾಯಿಲ ಉತ್ಸಾಹಿ ಯುವಕ ಮಂಡಲ, ಆಶಾ ಯಂಗ್‌ಸ್ಟರ್‍ಸ್ ಕ್ಲಬ್‌ನಲ್ಲಿ ಸೇವೆ, ತಾಲೂಕು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.