ಕಾಶಿಬೆಟ್ಟು: ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ: ಇಬ್ಬರಿಗೆ ಗಂಭೀರ ಗಾಯ

 

 

ಉಜಿರೆ: ಬೆಳ್ತಂಗಡಿ-ಉಜಿರೆ ರಸ್ತೆ ಮಧ್ಯೆ ಕಾಶಿಬೆಟ್ಟುಎಂಬಲ್ಲಿ ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನದ ನಡುವೆ ಪರಸ್ಪರ ಅಪಘಾತ ಸಂಭವಿಸಿದ ಘಟನೆ ಡಿ.28 ರಂದು ನಡೆದಿದೆ. ಘಟನೆಯಿಂದ ಇಬ್ಬರು ಯುವಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳು ಕಕ್ಕಿಂಜೆ ಪರಿಸರದವರಾಗಿದ್ದು, ಇಬ್ಬರಿಗೂ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ, ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳೀಯ ಆಟೋ ಚಾಲಕರಾಗಿರುವ ಪ್ರವೀಣ್ ಮತ್ತು ಪ್ರತೀಶ್ ರವರು ಗಾಯಾಳುಗಳನ್ನು ತಮ್ಮ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವಲ್ಲಿ ಸಹಕಾರಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.