ಬಂದಾರು: ಗ್ರಾ.ಪಂ.ವತಿಯಿಂದ ಸಾಧಕರಿಗೆ ಸನ್ಮಾನ

ಬಂದಾರು: ತೆಲಂಗಾಣದಲ್ಲಿ ನಡೆಯುವ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುವ ಬಂದಾರು ಪ್ರಾಥಮಿಕ ಶಾಲಾವಿದ್ಯಾರ್ಥಿಗಳಿಗೆ ಮತ್ತು ದೈಹಿಕ ಶಿಕ್ಷಕರಿಗೆ ಬಂದಾರು ಗ್ರಾ.ಪಂ.ವತಿಯಿಂದ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮವು  ಇತ್ತೀಚೆಗೆ ಜರುಗಿತು.  ಬಂದಾರು ಗ್ರಾ.ಪಂ ಅಧ್ಯಕ್ಷ ಉದಯ ಬಿ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಭೆ ಎಂಬುವುದು ಎಲ್ಲರಲ್ಲಿಯೂ ಇರುತ್ತದೆ. ಆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಅತ್ಯಗತ್ಯ. ನಮ್ಮ ಗ್ರಾಮದ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಗ್ರಾಮಕ್ಕೆ ಹೆಮ್ಮೆಯ ವಿಚಾರ. ನಮ್ಮ ಗ್ರಾಮದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನಾರ್ಹ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಮತ್ತು ದೈಹಿಕ ಶಿಕ್ಷಕ ಪ್ರಶಾಂತ್ ರವರಿಗೆ ಪಂಚಾಯತ್ ವತಿಯಿಂದ ಶಾಲು ಹೊದಿಸಿ, ಪುಸ್ತಕ ಹಾಗೂ ಆರ್ಥಿಕ ಸಹಕಾರದ ಚೆಕ್ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯ ಕೃಷ್ಣಯ್ಯ ಆಚಾರ್ಯ, ಗ್ರಾ.ಪಂ.ಉಪಾಧ್ಯಕ್ಷೆ ಚಂದ್ರಾವತಿ ಕೆ.ವೈ, ಸದಸ್ಯರಾದ ಹರೀಶ ಗೌಡ, ಸುಂದರ ಪೂಜಾರಿ, ಶ್ರೀಮತಿ ವಿಜಯ, ವಸಂತಿ, ಚಂದ್ರಕಲಾ, ಉಮಾವತಿ, ಲಲಿತಾ, ಶ್ರೀಮತಿ ರೂಪ ವಿಶ್ವಕರ್ಮ, ರಮೇಶ ಪೂಜಾರಿ, ದಿನೇಶ ಗೌಡ, ಪ್ರಮುಖರಾದ ಧರ್ಣಪ್ಪ ಗೌಡ, ರಾಮಣ್ಣ ಮಡಿವಾಳ, ಶೀನಪ್ಪ ಗೌಡ, ಬಾಲಕೃಷ್ಣ  ಹಾಗೂ ಗ್ರಾ.ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂ.ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ.ಕೆ ಸ್ವಾಗತಿಸಿ, ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.