ಎಲ್.ಐ.ಸಿ ನಿವೃತ್ತ ಅಭಿವೃದ್ಧಿ ಅಧಿಕಾರಿ ನಿಟ್ಟಡೆ ಸುಧಾಕರ ಹೆಗ್ಡೆ ನಿಧನ

ನಿಟ್ಟಡೆ: ಇಲ್ಲಿಯ ನಿಟ್ಟಡೆಗುತ್ತು ನಿವಾಸಿ ಭಾರತೀಯ ಜೀವ ವಿಮಾ ನಿಗಮದ ಬಂಟ್ವಾಳ ಶಾಖೆಯ ನಿವೃತ್ತ ಹಿರಿಯ ಅಭಿವೃದ್ಧಿ ಅಧಿಕಾರಿ ಸುಧಾಕರ ಹೆಗ್ಡೆ (ಎನ್.ಎಸ್ ಹೆಗ್ಡೆ) (70.ವ) ಇವರು ಡಿ.27ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಮಂಗಳೂರಿನ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ, ನಂತರ ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿಯಾಗಿ 25ವರ್ಷಗಳ ಕಾಲ ಸೇವೆ ಸಲ್ಲಿದ್ದರು. ಬಂಟ್ವಾಳ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾಗಿ, ಬಿ.ಸಿ ರೋಡ್ ಯಕ್ಷತರಂಗ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರು ಹವ್ಯಸಿ ಯಕ್ಷಗಾನ ಕಲಾವಿದರಾಗಿದ್ದು, ಉತ್ತಮ ಸಂಘಟಕರಾಗಿದ್ದರು. ಅಲ್ಲದೆ ಸಿದ್ಧಕಟ್ಟೆ ಮತ್ತು ಮಣಿನಾಲ್ಕೂರು ಕಾಯರ್‌ಪಲ್ಕೆಯಲ್ಲಿ ಆಂಗ್ಲಮಾಧ್ಯಮ ಖಾಸಗಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದರು.
ಮೃತರು ಓರ್ವ ಪುತ್ರ ,ಇಬ್ಬರು ಪುತ್ರಿಯವರು ಹಾಗೂ ಬಂದುವರ್ಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.