ಅನಾರು-ಪಟ್ರಮೆ: ಜಿಲ್ಲಾಮಟ್ಟದ ಜಾನುವಾರು ಜಾತ್ರೆ

Advt_NewsUnder_1
Advt_NewsUnder_1
Advt_NewsUnder_1

ಪಟ್ರಮೆ : ದ.ಕ ಜಿ. ಪಂ. ಮಂಗಳೂರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳು, ಧರ್ಮಸ್ಥಳ, ಬೆಳ್ತಂಗಡಿ, ಮಂಗಳೂರು ಇದರ ವತಿಯಿಂದ ಗ್ರಾಮ ಪಂ. ಪಟ್ರಮೆ, ಆಡಳಿತ ಮಂಡಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪಟ್ರಮೆ ಅನಾರು, ಹಾಲು ಉತ್ಪಾದಕರ ಸ.ಸಂಘ ಅನಾರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅನಾರು ಪಟ್ರಮೆ, ರಾಜ್ಯ ಸರಕಾರಿ ನೌಕರರ ವಿವಿದ್ದೋದ್ದೇಶ ಸ.ಸಂಘ ಬೆಳ್ತಂಗಡಿ, ದ.ಕ.ಸ.ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮಂಗಳೂರು, ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಜಿಲ್ಲಾ ಮಟ್ಟದ ಜಾನುವಾರು ಜಾತ್ರೆ ಮತ್ತು ಜಾನುವಾರು-ಕರುಗಳ ಪ್ರದರ್ಶನ, ಹಾಲು ಕರೆಯುವ ಸ್ಪರ್ಧೆ ಹಾಗೂ ವಿಚಾರಗೋಷ್ಠಿಯು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು .ವೇದಿಕೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ನಿತೇಶ್ ಬಲ್ಲಾಳ್, ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ. ಸತ್ಯನಾರಾಯಣ, ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ಮಂಗಳೂರು ಇದರ ಉಪನಿರ್ದೇಶಕ ಡಾ. ಮೋಹನ್ ಎಸ್, ಪಶು ಸಂಗೋಪನಾ ಇಲಾಖೆ ಬೆಳ್ತಂಗಡಿ ಸಹಾಯಕ ನಿರ್ದೇಶಕ ಡಾ.ರತ್ನಾಕರ್ ಮಲ್ಯ, ಪಶು ಸಂಗೋಪನಾ ಇಲಾಖೆ ಸುಳ್ಯ ಉಪನಿರ್ದೇಶಕ ಡಾ. ಗುರುಮೂರ್ತಿ, ಡಾ. ಜಯಕೀರ್ತಿ ಜೈನ್ ಮೊದಲಾದವರು ಉಪಸ್ಥಿತರಿದ್ದರು. ಡಾ.ಮೋಹನ್ ಸ್ವಾಗತಿಸಿ, ರತ್ನಾಕರ ಮಲ್ಯ ವಂದಿಸಿ, ಕು. ಗೀತಾ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.