ವಸ್ತ್ರಂ ಮೆನ್ಸ್‌ವೇರ್ ಉಜಿರೆ ಸ್ವಪ್ನ ಬಿಲ್ಡಿಂಗ್‌ಗೆ ಸ್ಥಳಾಂತರಗೊಂಡು ಶುಭಾರಂಭ

ಉಜಿರೆ: ಕಳೆದ 3 ವರ್ಷಗಳಿಂದ ಉಜಿರೆಯ ಸಾಯಿರಾಂ ಸೆಂಟ್ರಲ್‌ನಲ್ಲಿ ಕಾರ್ಯಾಚರಿಸುತ್ತಿದ್ದ ವಸ್ತ್ರಂ ಮೆನ್ಸ್‌ವೇರ್ ವಸ್ತ್ರ ಮಳಿಗೆ ಡಿ.26 ರಂದು ಉಜಿರೆ ಕಾಲೇಜು ರಸ್ತೆಯಲ್ಲಿರುವ ಸ್ವಪ್ನ ಬಿಲ್ಡಿಂಗ್‌ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯರು ದೀಪ ಬೆಳಗಿಸುವ ಮೂಲಕ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ ಬೆಳೆಯುತ್ತಿರುವ ಉಜಿರೆಗೆ ಈ ವಸ್ತ್ರ ಮಳಿಗೆಯು ಶೋಭೆಯನ್ನು ತಂದಿದೆ. ಈ ಸಂಸ್ಥೆಯು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಲಯನ್ಸ್ ಅಧ್ಯಕ್ಷ ಎಂ.ಜಿ. ಶೆಟ್ಟಿ, ಭಾರತೀಯ ಭೂದಳದ ಸೈನಿಕ ತೋಮಸ್ ಪಿಲಿಫ್, ಉಜಿರೆಯ ಉದ್ಯಮಿಗಳಾದ ರವಿಕುಮಾರ್ ಬರಮೇಲು ಮತ್ತು ಹರೀಶ್ ಕಾವ, ಹೋಟೆಲ್ ಸ್ವಪ್ನ ಮತ್ತು ಕಟ್ಟಡದ ಮಾಲಕರಾದ ಚಿತ್ರೇಶ್ ಶೆಟ್ಟಿ ಉಜಿರೆ ಆಗಮಿಸಿ ಶುಭ ಹಾರೈಸಿದರು. ಸಂಸ್ಥೆಯ ಪಾಲುದಾರ ಮಾಲಕರಾದ ಸುಧಾಕರ ಮತ್ತು ಶ್ರೀಮತಿ ಸವಿತಾ ಹಾಗೂ ಪಾಲುದಾರ ಮಾಲಕರಾದ ಅಭಿಷೇಕ್‌ರವರು ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು. ಮಾಲಕ ಪಾಲುದಾರರ ಮಾತಾಪಿತರು ಹಾಗೂ ಬಂದುವರ್ಗದವರು ಉಪಸ್ಥಿತರಿದ್ದು ಸಹಕರಿಸಿದರು. ಸಂಸ್ಥೆಯ ಶುಭಾರಂಭ ಪ್ರಯುಕ್ತ ಡಿ. 26ರಿಂದ ಜ. 6ರ ವರೆಗೆ ಆಯ್ದ ವಸ್ತ್ರಗಳ ಮೇಲೆ 20% ರಿಯಾಯಿತಿ ಸೌಲಭ್ಯವಿದ್ದು, ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಸಂಸ್ಥೆಯ ಪಾಲುದಾರ ಮಾಲಕರು ವಿನಂತಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.